Crop loss compensation : ದೇಶದಲ್ಲಿ ಶೇಕಡಾ 60 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದು, ರೈತರು ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದೇ ಪರಿತಪಿಸುವಂತಾಗುತ್ತದೆ. ಈ ಬಗ್ಗೆ ಸರ್ಕಾರವು ಗಮನ ಹರಿಸಿ ನಷ್ಟ ಹೊಂದಿದ ರೈತರಿಗೆ ಆರ್ಥಿಕ ಸಾಂತ್ವಾನ ನೀಡುವ ನಿಟ್ಟಿನಲ್ಲಿ, ಸರ್ಕಾರದಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆಗಳ ಪ್ರಯೋಜನ ಪಡೆಯಲು ಪ್ರೂಟ್ಸ್ ತಂತ್ರಾಂಶದಲ್ಲಿ ಸರ್ವೆ ನಂಬರ್ಗೆ ಆಧಾರ್ ಸಂಖ್ಯೆ ನಮೂದಿಸಿ ಎಫ್.ಐ.ಡಿ. ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ.
ನೋಂದಣಿಯಾದ ವಿವರಗಳನ್ನು ಬ್ಯಾಂಕ್ನಿಂದ ಬೆಳೆ ಸಾಲ, ಬೆಳೆ ವಿಮೆ ಹಾಗೂ ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ(Belevime Parihara). ಬೆಳೆ ನಷ್ಟ ಪರಿಹಾರ(Crop loss compensation) / ಇನ್ ಪುಟ್ ಸಬ್ಸಿಡಿ ಮುಂತಾದ ಸವಲತ್ತುಗಳನ್ನು ಫ್ರೂಟ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಮತ್ತು ಬೆಳೆ ಸಮೀಕ್ಷೆ ಆಧಾರದ ಮೇಲೆ ವಿತರಿಸಲಾಗುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಈ ತಂತ್ರಾಂಶದಲ್ಲಿ ನೊಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮುಖ್ಯವಾಗಿ ಫ್ರೂಟ್ ಐ.ಡಿ.ಯೊಂದಿಗೆ ಸೇರ್ಪಡೆಯಾಗದೆ ಇರುವ ಸರ್ವೆ ನಂಬರ್ ಗಳನ್ನು ಸೇರ್ಪಡೆಗೊಳಿಸಲು ಜಿಲ್ಲೆಯ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತಮ್ಮ ಆಧಾರ್ ಕಾರ್ಡ್, ಪಹಣಿ ಪತ್ರ, ಬ್ಯಾಂಕ್ ಖಾತೆ ವಿವರ, ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್, ರೇಷನ್ ಕಾರ್ಡ್ ಮತ್ತು ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಿಕೊಳ್ಳಲು ತಿಳಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ ‘ರಾಮಾಯಣ’ಕ್ಕೆ ಯಶ್ ವಿಲನ್ ?! ಅಬ್ಬಬ್ಬಾ ಈ ಪರಿ ಸಂಭಾವನೆ ಪಡೆಯುತ್ತಿದ್ದಾರಾ ?
