Home » Important Information: ರೈತರೇ ಗಮನಿಸಿ.. ನೀವು ಬೆಳೆದ ಭತ್ತ ಇಟ್ಟಲ್ಲೇ ಒಣಗುತ್ತಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ

Important Information: ರೈತರೇ ಗಮನಿಸಿ.. ನೀವು ಬೆಳೆದ ಭತ್ತ ಇಟ್ಟಲ್ಲೇ ಒಣಗುತ್ತಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ

0 comments
Important Information

Important Information: ರೈತರೇ (Farmers)ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ (Important Information)ಇಲ್ಲಿದೆ ನೋಡಿ! ಕೃಷಿಯನ್ನು ನೆಚ್ಚಿಕೊಂಡು ಜೀವನ ನಡೆಸುವ ಅದೆಷ್ಟೋ ಮಂದಿ ರೈತರಿಗೆ ಒಂದೆಡೆ ಬೆಳೆದ ಬೆಳೆಗೆ ಸೂಕ್ತಬೆಲೆ ದೊರೆಯದೆ, ಮತ್ತೊಂದೆಡೆ ಕೃಷಿಗೆ ನಾನಾ ಬಗೆಯ ರೋಗಗಳು ಕಾಣಿಸಿಕೊಂಡು ಕೈ ಸುಟ್ಟುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.

ನಾವು ಸೇವಿಸುವ ಪ್ರತಿ ಆಹಾರ ಕೃಷಿಯಿಂದ(Agriculture)ಅದರಲ್ಲಿಯೂ ವಿಶೇಷವಾಗಿ ರೈತರ ಶ್ರಮದಿಂದ ದೊರೆಯುತ್ತಿದೆ ಎಂಬ ಸತ್ಯ ತಿಳಿದಿದ್ದರೂ ಕೂಡ ಕೃಷಿ ಎಂದರೆ ಅಸಡ್ಡೆ ತೋರುವವರೆ ಹೆಚ್ಚು. ಹೀಗಿದ್ದಾಗ ಕೃಷಿಯ ಕಡೆ ಒಲವು ತೋರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಅನ್ನೋದು ಕೂಡ ಅಷ್ಟೇ ಸತ್ಯ. ಪ್ರಸ್ತುತ ಕಾರ್ಕಳ ತಾಲೂಕಿನ ಅಜೆಕಾರು ವ್ಯಾಪ್ತಿಯ ರೈತರ ಭತ್ತದ(Paddy)ಸಸಿಗಳ ಒಣಗುವಿಕೆಯ ಕುರಿತು ಸುದ್ದಿ ವರದಿಯಾದ ಹಿನ್ನೆಲೆ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿ ನೀಡಿ ಭತ್ತದ ಸಸಿಗಳ ಒಣಗುವಿಕೆಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ.

ಒಂದೆಡೆ ತಡವಾಗಿ ಪ್ರಾರಂಭವಾದ ಮಳೆ ಮತ್ತು ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೇ ಇರುವ ಹಿನ್ನೆಲೆ ಪ್ರಮುಖವಾಗಿ ಭತ್ತದ ಬೆಳೆ ಒಣಗುತ್ತಿರುತ್ತದೆ. ಗದ್ದೆಗಳಲ್ಲಿ ನೀರಿಲ್ಲದ ಹಿನ್ನೆಲೆ ಕಳೆಗಳು ಮತ್ತು ನೀರಿನ ಸಮಸ್ಯೆಯಿಂದಾಗಿ ಮೇಲು ಗೊಬ್ಬರ ಕೊಡಲಾಗದೆ ಇರುವ ಸಂದರ್ಭ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಭತ್ತದ ಬೆಳೆಯಲ್ಲಿ ವಿಶೇಷವಾಗಿ ಪೋಟಾಷ್ ಕೊರತೆಯ ಪರಿಣಾಮ ಭತ್ತದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಹೆಚ್ಚು ತೆನೆಗಳು ಒಡೆಯದೇ ಒಣಗುವ ಸ್ಥಿತಿಗೆ ಬರುತ್ತದೆ. ಹಡಿಲು ಭೂಮಿಯಲ್ಲಿರುವ ಸಹ್ಯಾದ್ರಿ ಬ್ರಹ್ಮ ತಳಿಯಲ್ಲಿ ಭತ್ತದ ಎಲೆಗಳು ಕೆಂಪಾಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತವೆ. ಈ ಸಂದರ್ಭ ಯಾವುದಾದರೂ ಕೀಟ ರೋಗದ ಭಾದೆ ಇದೆಯೇ ಎಂಬುದನ್ನು ಗಮನಿಸಬೇಕು.

ನೀರೊದಗಿಸುವ ಸಾಧ್ಯತೆಯಿರುವ ಸ್ಥಳದಲ್ಲಿ ಮಳೆಗಾಗಿ ಎದುರು ನೋಡದೆ ನೀರು ಒದಗಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಇದರ ಜೊತೆಗೆ ಪ್ರತಿ ಮೂರು ವರ್ಷಕ್ಕೊಮ್ಮೆಯಾದರು ಕೂಡ ಭೂಮಿಯ ಫಲವತ್ತತೆ ಪರೀಕ್ಷೆ ಮಾಡಿಸಬೇಕು. ನೀರಿನ ವ್ಯವಸ್ಥಗಾಗಿ ಕಲ್ಪಿಸಿದ ಗದ್ದೆಗಳಿಗೆ ಯುರಿಯಾ 30 ಕೆ.ಜಿ ಹಾಗೂ ಎಂ.ಒ.ಪಿ 15 ಕಿ.ಗ್ರಾಂ ಪ್ರತಿ ಎಕರೆಗೆ ಮೇಲು ಗೊಬ್ಬರ ಹಾಕಬೇಕು. ಇದಲ್ಲದೆ, ಗದ್ದೆಗಳಲ್ಲಿ ಕಳೆ ನಿಯಂತ್ರಣ ಮಾಡುವ ಮೂಲಕ ವೈಜ್ಞಾನಿಕ ಸಲಹೆಯನ್ನು ಅನುಸರಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Karantaka Rain Alert: ಸೆ.12 ರವರೆಗೆ ಈ ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ- ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

You may also like

Leave a Comment