Tax on poultry farming: ಕೋಳಿ ಸಾಕಣೆ ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದೊಂದು ವಾಣಿಜ್ಯ ಚಟುವಟಿಕೆ ಎಂದು ಬಿಂಬಿಸಿ ಗ್ರಾಮ ಪಂಚಾಯತ್ ‘ಗ್ರಾಮ ಸ್ವರಾಜ್’ ಕಾಯಿದೆಯಡಿ ಯಾವುದೇ ರೀತಿಯ ತೆರಿಗೆ(Tax on poultry farming )ವಿಧಿಸುವುದು ಸರಿಯಲ್ಲ, ಅದಕ್ಕೆ ಕಾನೂನಿನಲ್ಲೂ ಅವಕಾಶವಿಲ್ಲ ಎನ್ನುವ ಮಹತ್ವದ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಬೆಂಗಳೂರು ಉತ್ತರದ ಸೊಂಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ನರಸಿಂಹಮೂರ್ತಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಇಂತಹದೊಂದು ತೀರ್ಪು ನೀಡಿದ್ದು, ಕೋಳಿ ಸಾಕಾಣಿಕೆ ಮಾಡುವ ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಅಲ್ಲದೇ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆ ಕೃಷಿ ಚಟುವಟಿಕೆಯಾಗಿದ್ದು, ರೈತರು ತಮ್ಮ ಕೃಷಿ ಭೂಮಿಯಲ್ಲೇ ಕಟ್ಟಡ ನಿರ್ಮಿಸುವ ಅಗತ್ಯತೆ ಹೆಚ್ಚಿದೆ. ಕೃಷಿ ಭೂಮಿಯನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತಿಸಿದ ಬಳಿಕ ಗ್ರಾಮ ಪಂಚಾಯತ್ ಗ್ರಾಮ ಸ್ವರಾಜ್ ಕಾಯಿದೆ 4-ರ (ಎ)(2) ಅಡಿಯಲ್ಲಿ ನಿರಾಪೇಕ್ಷಣ ಪತ್ರದ ಜೊತೆಗೆ ತೆರಿಗೆ ವಿಧಿಸುವ ಅಗತ್ಯತೆ ಇಲ್ಲ ಮತ್ತೂ ಕಾನೂನಿನಲ್ಲೂ ಅವುಗಳಿಗೆ ಅವಕಾಶವಿಲ್ಲ ಎಂದಿದೆ.
ಈ ಬಗ್ಗೆ ವಾದ ಮಂಡಿಸಿದ ಸರ್ಕಾರದ ಪರ ವಕೀಲರು,ಕೋಳಿ ಸಾಕಾಣಿಕೆ ಒಂದು ವಾಣಿಜ್ಯ ಚಟುವಟಿಕೆಯಾಗಿದ್ದು,ಕೋಳಿ ಸಾಕಾಣಿಕೆ ಕೇಂದ್ರದ ಕಟ್ಟಡಕ್ಕೆ ವಾಣಿಜ್ಯ ತೆರಿಗೆ ವಿಧಿಸಬಹುದು ಎಂದಿದ್ದು, ಈ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್ ಗ್ರಾಮ ಪಂಚಾಯತ್ ಪರ ನೋಟೀಸ್ ರದ್ದುಪಡಿಸಿ, ಕೋಳಿ ಸಾಕಾಣಿಕೆ ಕೃಷಿ ಚಟುವಟಿಕೆ ಎನ್ನುವ ತೀರ್ಪುನ್ನು ಎತ್ತಿ ಹಿಡಿದಿದೆ.
ಇದನ್ನೂ ಓದಿ : ಹಳೇ ವಾಹನ ಇರುವವರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ- ಸಂಪುಟ ಸಭೆಯಲ್ಲಿ ಆಯ್ತೊಂದು ಮಹತ್ವದ ನಿರ್ಧಾರ !!
