Home » ಕಡಬದಲ್ಲಿ ಬೆಳಕಿಗೆ ಬಂದ ವಿಸ್ಮಯ!! ನೆಟ್ಟು ವರ್ಷ ತುಂಬುವುದರೊಳಗೆ ಫಸಲು ನೀಡಿದ ಅಡಿಕೆ ಗಿಡ-ಪ್ರಕೃತಿಗೇ ಸವಾಲು!!

ಕಡಬದಲ್ಲಿ ಬೆಳಕಿಗೆ ಬಂದ ವಿಸ್ಮಯ!! ನೆಟ್ಟು ವರ್ಷ ತುಂಬುವುದರೊಳಗೆ ಫಸಲು ನೀಡಿದ ಅಡಿಕೆ ಗಿಡ-ಪ್ರಕೃತಿಗೇ ಸವಾಲು!!

0 comments

ಕಡಬ:ಮನುಷ್ಯನ ಆಡಂಬರದ ಬದುಕಿಗೆ ಸೆಡ್ಡುಹೊಡೆದು ಹಲವು ಪ್ರಾಕೃತಿಕ ವಿಕೋಪಗಳ ವರದಿಯಾಗುತ್ತಿರುವ ನಡುವೆ ಕೆಲವೊಂದು ರೀತಿಯ ವಿಸ್ಮಯಗಳು ಪ್ರಕೃತಿಯಲ್ಲಿ ಬೆಳಕಿಗೆ ಬರುತ್ತಲೇ ಇವೆ.

ಅಡಿಕೆ ಕೃಷಿಯಲ್ಲಿ ಮುಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅಡಿಕೆ ಗಿಡ ನೆಟ್ಟು ಫಸಲು ನೀಡಬೇಕಾದರೆ ಐದು ವರ್ಷಗಳು ಬೇಕು. ಇತ್ತೀಚಿನ ಆಧುನಿಕತೆಯಲ್ಲಿ ಹೈಬ್ರಿಡ್ ತಳಿಗಳು ಮೂರು ವರ್ಷದಲ್ಲೇ ಫಸಲು ನೀಡುತ್ತಿದ್ದೂ, ಇದರ ನಡುವೆ ಒಂದೇ ವರ್ಷದಲ್ಲಿ ಅಡಿಕೆ ಗಿಡವೊಂದು ಹಿಂಗಾರ ಒಡೆದು ಫಸಲು ನೀಡಲು ತುದಿಗಾಲಲ್ಲಿ ನಿಂತ ವಿಸ್ಮಯವೊಂದು ತಾಲೂಕಿನ ಕುಂತೂರು ಸಮೀಪದ ಕೆದ್ದೋಟೆ ಎಂಬಲ್ಲಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಕುಂತೂರು ಗ್ರಾಮದ ಕೆದ್ದೋಟೆ ರಾಮಣ್ಣ ಗೌಡ ಎಂಬವರ ತೋಟದಲ್ಲಿ ಇಂತಹದೊಂದು ವಿಸ್ಮಯ ಕಂಡುಬಂದಿದೆ.ಕಳೆದ ವರ್ಷ ನೆಟ್ಟ ಅಡಿಕೆ ಗಿಡ ಈ ವರ್ಷ ಹಿಂಗಾರ ಬಿಟ್ಟಿರುವುದು ಮನೆ ಮಂದಿ ಹಾಗೂ ಕೆಲಸದ ಆಳುಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.ಕಳೆದ ಹಲವು ವರ್ಷಗಳ ಹಿಂದೆ ಒಂದೇ ಕಾಂಡದಲ್ಲಿ ಏಳು ಅಡಿಕೆ ಗಿಡಗಳು ಬೆಳೆದು ಅಚ್ಚರಿ ಮೂಡಿಸಿದ್ದು,ಸದ್ಯ ಎಳೆಯ ಗಿಡ ಹಿಂಗಾರ ಬಿಟ್ಟಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಕೃಷಿ ಪ್ರೇಮಿ ಕುತೂಹಲಿಗರು ಅಡಿಕೆ ಗಿಡವನ್ನು ವೀಕ್ಷಿಸಲು ರಾಮಣ್ಣ ಗೌಡರ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

:ದೀಪಕ್ ಹೊಸ್ಮಠ

You may also like

Leave a Comment