PM Kisan: ಈಗಾಗಲೇ 2018ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಪಿಎಂ ಕಿಸಾನ್ (PM Kisan) ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ನಂತೆ ಈ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತಿತ್ತು. ಪ್ರತಿ ಕಂತಿನಲ್ಲೂ 2 ಸಾವಿರ ರೂಪಾಯಿ ನೀಡಲಾಗುತ್ತಿತ್ತು . ಆದರೆ ಇದೀಗ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಹೌದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ರೈತರಿಗೆ ಈಗ ವಾರ್ಷಿಕವಾಗಿ ನೀಡಲಾಗುತ್ತಿರುವ 6,000 ರೂಪಾಯಿಗಳ ಮೊತ್ತವನ್ನು 8,000 ರೂಪಾಯಿಗಳಿಗೆ ಏರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಕಿಸಾನ್ ಸಮ್ಮಾನ್ ಯೋಜನೆ ಮೊತ್ತದಲ್ಲಿ 2000 ರೂಪಾಯಿ ಏರಿಕೆ ಮಾಡುವ ಕುರಿತಂತೆ, ಸರ್ಕಾರದ ಹಂತದಲ್ಲಿ ಈಗಾಗಲೇ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ಹಣಕಾಸು ಇಲಾಖೆಯ ಅನುಮೋದನೆ ದೊರೆತರೆ ಈ ಎರಡು ಸಾವಿರ ರೂಪಾಯಿಗಳ ಏರಿಕೆಯೊಂದಿಗೆ ಈಗ ವಾರ್ಷಿಕವಾಗಿ 6,000 ರೂಪಾಯಿ ಪಡೆಯುತ್ತಿರುವ ಸಣ್ಣ ರೈತರು 8,000 ರೂಪಾಯಿಗಳನ್ನು ಪಡೆಯಲಿದ್ದಾರೆ.
ಇದನ್ನೂ ಓದಿ: ಭರ್ತಿ 100 ವರ್ಷ ಬದುಕಬೇಕೆಂಬ ಬಯಕೆಯೇ ?! ಕೊನೆಗೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ ‘ಶತಾಯುಷ್ಯ’ ದ ರಹಸ್ಯ
