Home » ಮಂಗಳೂರು : ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕದ್ದೊಯ್ದ ಕಳ್ಳರು, ದೂರು ದಾಖಲು

ಮಂಗಳೂರು : ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕದ್ದೊಯ್ದ ಕಳ್ಳರು, ದೂರು ದಾಖಲು

0 comments

ಇತ್ತೀಚಿಗೆ ಅಡಿಕೆ ಬೆಲೆ ಏರಿಕೆಯಾದ ನಂತರ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅಂತೆಯೇ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಮಂಗಳೂರಿನ ಕೊಣಾಜೆ ಗ್ರಾಮದ ನಾಟೆಕಲ್ ಸೈಟ್ ಎಂಬಲ್ಲಿ ನಡೆದಿದೆ.

ನಾಟೆಕಲ್ ಸೈಟ್ ನಿವಾಸಿ ಮಹಮ್ಮದ್ ಎ.ಎಸ್ ಎಂಬವರ ಮನೆಯಿಂದ ಈ ಕಳ್ಳತನ ನಡೆದಿದೆ. ಸುಮಾರು 60 ಕೆಜಿ ಅಡಿಕೆ ಕಳವು ಮಾಡಲಾಗಿದೆ ಎಂದು ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment