Milk price: ರೈತರಿಗೆ 1 ಲೀಟರ್ ಹಾಲಿಗೆ ಸಹಾಯಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಮುಖ್ಯಮಂತ್ರಿ ಗಳು ರೈತರಿಗೆ ಹಸುಗಳನ್ನು ಸಾಕಿ ಮೇವು ನೀಡಲು ಹೆಚ್ಚು ಖರ್ಚುಗಳು ಆಗುತ್ತವೆ. ಮೇವು ಸಾಕಾಣಿಕೆಗೆ ರೈತರಿಗೆ ನೆರವಾಗಲು, ಮೇವಿನ ಹಿಂಡಿ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಪ್ರತಿಲೀಟರ್ ಹಾಲಿನ ಮೇಲೆ 5 ರೂಪಾಯಿ ಸಹಾಯಧನವನ್ನು ಹಿಂದೆ ನೀಡಲಾಗುತ್ತಿತ್ತು. ಅದನ್ನೀಗ ಈ ವರ್ಷದ ಅವಧಿಯಲ್ಲೇ 7 ರೂಪಾಯಿಗೆ ಹೆಚ್ಚಿಸುತ್ತಿದ್ದೇವೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಹಿತದೃಷ್ಟಿಯಿಂದ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹಧನವನ್ನು ಈ ವರ್ಷದ ಅವಧಿಯಲ್ಲಿ 7 ರೂಪಾಯಿಗೆ ಹೆಚ್ಚಿಸುವುದಾಗಿ ತಿಳಿಸಿದರು.ಪ್ರಸ್ತುತ ಪ್ರೋತ್ಸಾಹಧನವು ರೈತರಿಗೆ ಸಂಪೂರ್ಣವಾಗಿ ತಲುಪುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ಹೊರತಾಗಿಯೂ ಸರ್ಕಾರದಿಂದ ನೆರವು ಮುಂದುವರಿಯುತ್ತದೆ ಎಂದು ಭರವಸೆ ನೀಡಿದರು.
