Home » ಬೆಳ್ತಂಗಡಿ | ಅಕ್ರಮ ಮರ ಸಾಗಾಟ, ಲಾರಿ ಮತ್ತು ಮರ ವಶಕ್ಕೆ

ಬೆಳ್ತಂಗಡಿ | ಅಕ್ರಮ ಮರ ಸಾಗಾಟ, ಲಾರಿ ಮತ್ತು ಮರ ವಶಕ್ಕೆ

0 comments

ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಕಣಿಯೂರು ಎಂಬ ಪ್ರದೇಶದಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ನಾಗರಿಕರು ತಡೆಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಇಂದು ಸರಿಸುಮಾರು ಎಂಟು ಗಂಟೆಗೆ ನಡೆದಿದೆ.

ಬೆಳಾಲು ಕಡೆಯಿಂದ ಉಪ್ಪಿನಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಲಾರಿಯು ಕಣಿಯೂರು ಪ್ರದೇಶದಲ್ಲಿ ರಿಕ್ಷಾ ಚಾಲಕರಿಗೆ ಮಾರ್ಗ ಬಿಡದೆ ರಿಕ್ಷಾ ಚಾಲಕರೊಂದಿಗೆ ವಾಗ್ವಾದಕ್ಕೆ ಲಾರಿ ಚಾಲಕ ಮುಂದಾದಾಗ ಊರಿನವರಲ್ಲಿ ಅನುಮಾನ ಬಂದ ಕಾರಣ ಲಾರಿ ತಡೆಹಿಡಿದರು.

ಲಾರಿ ಚಾಲಕನಲ್ಲಿ ಯಾವುದೇ ಪರವನಿಗೆ ಇಲ್ಲ ಎಂದು ಲಾರಿ ಚಾಲಕ ವಿಚಾರಿಸುವಾಗ ಹೇಳಿರುತ್ತಾನೆ.

ಸರಿಸುಮಾರು ಏಳು ಲಕ್ಷ ಮೌಲ್ಯದ ಮರ ವಸಪಡಿಸಿಕೊಂಡಿದ್ದಾರೆ.

You may also like

Leave a Comment