Home » Mangaluru : ಮಂಗಳೂರಿನಲ್ಲಿ ಮತ್ತೊಂದು ದುರ್ಘಟನೆ – ಅಲೋಶಿಯಸ್ ಕಾಲೇಜಿನ ಮತ್ತೋರ್ವ ಉಪನ್ಯಾಸಕಿ ಸಾವು !!

Mangaluru : ಮಂಗಳೂರಿನಲ್ಲಿ ಮತ್ತೊಂದು ದುರ್ಘಟನೆ – ಅಲೋಶಿಯಸ್ ಕಾಲೇಜಿನ ಮತ್ತೋರ್ವ ಉಪನ್ಯಾಸಕಿ ಸಾವು !!

0 comments

Mangaluru : ಕೆಲವು ದಿನಗಳ ಹಿಂದಷ್ಟೇ ಮಂಗಳೂರಿನ(Mangaluru )ಸಂತಲೋಷಿಯಸ್ ಕಾಲೇಜಿನ ಉಪನ್ಯಾಸಕಿಯಾಗಿದ್ದ ಗ್ಲೋರಿಯಾ ರೋಡ್ರಿಗಸ್ ಅಕಾಲಿಕ ಮರಣ ಮಾಸುವ ಮುನ್ನವೇ ಇದೀಗ ಅದೇ ಕಾಲೇಜಿನಲ್ಲಿ ಮತ್ತೊಂದು ಅಘಾತಕಾರಿ ಘಟನೆ ನಡೆದಿದ್ದು ಕಾಲೇಜಿನ ಮತ್ತೊಂದು ಉಪನ್ಯಾಸಕಿ ನಿಧನರಾಗಿದ್ದಾರೆ.

ಹೌದು, ಉಪನ್ಯಾಸಕಿ ರಚಿತಾ ಕಬ್ರಾಲ್ (42) ಬುಧವಾರ ಇಹಲೋಕ ತ್ಯಜಿಸಿದ್ದಾರೆ. ಅವರು ತಮ್ಮ ಏಕೈಕ ಪುತ್ರಿ ಮತ್ತು ಸಹೋದರರನ್ನು ದುಃಖದ ಮಡುವಿನಲ್ಲಿ ಬಿಟ್ಟು ಅಗಲಿದ್ದಾರೆ. ವಾರದ ಅಂತರದಲ್ಲಿ ಇಬ್ಬರು ಉಪನ್ಯಾಸಕಿಯರು ಅಕಾಲಿಕ ಮರಣಕ್ಕೆ ತುತ್ತಾಗಿರುವುದು ಶೈಕ್ಷಣಿಕ ಸಮುದಾಯ ಮತ್ತು ಸ್ನೇಹಿತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

1981 ರ ಡಿಸೆಂಬರ್ 11 ರಂದು ಜನಿಸಿದ ರಚಿತಾ ಅವರು ಮಂಗಳೂರು ಬಲ್ಮಠದ ದಿವಂಗತ ಹ್ಯಾನಿಬಲ್ ಕಬ್ರಾಲ್ ಮತ್ತು ಶೈಲಿನಿ ಕಬ್ರಾಲ್ ಅವರ ಪ್ರೀತಿಯ ಪುತ್ರಿಯಾಗಿದ್ದರು. ಅವರು ರೋಶನಿ ನಿಲಯದಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ತಮ್ಮ ಶೈಕ್ಷಣಿಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ವೃತ್ತಿಯನ್ನು ಮುಂದುವರಿಸಿ ಮಂಗಳೂರಿನ ಅಲೋಸಿಸ್ ಕಾಲೇಜಿನಲ್ಲಿ ಸದ್ಯ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ವಿಧಿಯಾಟ ಬೇರೆ ಆಗಿತ್ತು. ಸಧ್ಯ ಅವರ ಅಕಾಲಿಕ ನಿಧನಕ್ಕೆ ಶೈಕ್ಷಣಿಕ ಸಮುದಾಯ ಮತ್ತು ಸ್ನೇಹಿತರು ಶೋಕ ವ್ಯಕ್ತಪಡಿಸಿದ್ದಾರೆ.

You may also like

Leave a Comment