Home » ಅಡಿಕೆ ಬೆಳೆಗಾರರೇ ಗಮನಿಸಿ : ಬೆಲೆ ಕುಸಿತದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ‘ಶಾಕ್’

ಅಡಿಕೆ ಬೆಳೆಗಾರರೇ ಗಮನಿಸಿ : ಬೆಲೆ ಕುಸಿತದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ‘ಶಾಕ್’

by Mallika
0 comments

ಅಡಿಕೆಗೆ ಭಾರತದಲ್ಲಿ ಪವಿತ್ರ ಸ್ಥಾನವಿದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೂ ಬಳಸಲ್ಪಡುವ ಅಡಿಕೆಗೆ ಗೌರವ ಸ್ಥಾನವೊಂದು ಇದೆ. ಹಾಗೇ ನೋಡಿದರೆ ಈಗ ಅಡಿಕೆ ಬೆಳೆಯುವ ರೈತರು ಪಡುವಷ್ಟು ಬವಣೆ ಯಾರಿಗೂ ಬೇಡ. ಒಂದು ಕಡೆ ಭೂತಾನ್ ಅಡಿಕೆ ಆಮದಿನ ಸಂಕಷ್ಟ, ನಂತರ ಮಳೆ, ಆಮೇಲೆ ಅಡಿಕೆಗೆ ರೋಗ. ಇವೆಲ್ಲದರ ಮಧ್ಯೆ ಈಗ ಅಡಿಕೆಗೆ ಈಗ ಬೆಲೆ ಕುಸಿತದ ಭೀತಿ ರೈತರಿಗೆ ಉಂಟಾಗಿದೆ.

ಹೌದು, ಭೂತಾನ್ ಅಡಿಕೆ ಅಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಕುಸಿತವಾಗಬಹುದು ಎಂಬ ಭೀತಿ ಬೆಳೆಗಾರರನ್ನು ಕಾಡುತ್ತಿದ್ದು, ಇದರ ಮಧ್ಯೆ ಅಡಕೆಗೆ ಕಾಣಿಸಿಕೊಂಡಿರುವ ಎಲೆ ಚುಕ್ಕಿ ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಅಗತ್ಯ ಪ್ರಮಾಣದ ಬಿಸಿಲು ಅಡಿಕೆಗೆ ಸಿಗದ ಕಾರಣ ಎಲೆ ಚುಕ್ಕಿ ರೋಗ ಉಲ್ಬಣಗೊಳ್ಳುತ್ತಿದೆ ಎನ್ನಲಾಗಿದ್ದು, ಇದರ ಪರಿಣಾಮ ಫಸಲು ಕೂಡ ಕಡಿಮೆಯಾಗತೊಡಗಿದೆ.

ದೇಶದಲ್ಲಿ ಬೆಳೆಯುವ ಅಡಿಕೆ ಪೈಕಿ ಕರ್ನಾಟಕ ಮತ್ತು ಕೇರಳದಿಂದಲೇ ಶೇಕಡ 70ರಷ್ಟು ಪಾಲು ಇದ್ದು, ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಭತ್ತ ತೆಗೆದು ವ್ಯಾಪಕ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಇದರ ಮಧ್ಯೆ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡಿಕೆಯ ಎಲೆ ಚುಕ್ಕಿ ರೋಗ ಮತ್ತಷ್ಟು ವ್ಯಾಪಿಸುವಂತೆ ಮಾಡುತ್ತಿದೆ.

You may also like

Leave a Comment