Home » ಉಳ್ಳಾಲ: ಮಸೀದಿ ಎದುರು ನಿಂತಿದ್ದ ಯುವಕನಿಗೆ ಚೂರಿ ಇರಿತ!! ಯುವತಿಯ ವಿಚಾರವಾಗಿ ದಾಳಿಯ ಶಂಕೆ-ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ದೌಡು

ಉಳ್ಳಾಲ: ಮಸೀದಿ ಎದುರು ನಿಂತಿದ್ದ ಯುವಕನಿಗೆ ಚೂರಿ ಇರಿತ!! ಯುವತಿಯ ವಿಚಾರವಾಗಿ ದಾಳಿಯ ಶಂಕೆ-ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ದೌಡು

0 comments

ಯುವತಿಯ ವಿಷಯಕ್ಕೆ ಸಂಬಂಧಿಸಿದಂತೆ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಯೊಂದು ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಬಳಿಯ ಮಸೀದಿ ಪಕ್ಕ ನಡೆದಿದೆ.

ಅಲ್ ಸದೀನ್ ( 24) ಚೂರಿ ಇರಿತಕ್ಕೊಳಗಾದ ಯುವಕ.

ಕೋಡಿ ನಿವಾಸಿ ಮೊಯ್ದಿನ್ ಎಂಬುವವರ ಪುತ್ರ ಅಲ್ ಸದೀನ್ ಮಸೀದಿ ಸಮೀಪ ಇದ್ದಾಗ, ತಂಡವೊಂದು ಆಗಮಿಸಿ ಯುವತಿ ವಿಚಾರವಾಗಿ ಮಾತು ತೆಗೆದು, ಜಗಳ ಮಾಡಿ, ನಂತರ ಚೂರಿಯಿಂದ ಇರಿದು ಗಾಯ ಮಾಡಿದ್ದಾರೆ.

ಮೂಲಗಳ ಪ್ರಕಾರ ಹಲ್ಲೆಗೊಳಗಾದವ ಹಾಗೂ ಹಲ್ಲೆ ಮಾಡಿದವರು ಇವರೆಲ್ಲ ಸ್ನೇಹಿತರು. ಇವರು ನಾಲ್ಕು ಜನ ಮಾತನಾಡುತ್ತಾ ಇದ್ದ ಸಂದರ್ಭದಲ್ಲಿ ಯುವತಿಯೋರ್ವಳ ವಿಷಯ ಬಂದಿದ್ದು, ವಿಷಯ ತಾರಕಕ್ಕೇರಿ ಗಲಾಟೆಗೆ ಕಾರಣವಾಗಿದೆ.

ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚೂರಿ ಇರಿತಕ್ಕೆ ಒಳಗಾದ ಯುವಕ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದಾಳಿಗೊಳಗಾದವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿವೆ.

You may also like

Leave a Comment