Home » ಬಂಟ್ವಾಳ : ಎರಡು ತಂಡಗಳ ನಡುವೆ ಹೊಡೆದಾಟ,ನಾಲ್ವರು ಪೊಲೀಸರ ವಶಕ್ಕೆ

ಬಂಟ್ವಾಳ : ಎರಡು ತಂಡಗಳ ನಡುವೆ ಹೊಡೆದಾಟ,ನಾಲ್ವರು ಪೊಲೀಸರ ವಶಕ್ಕೆ

by Praveen Chennavara
0 comments

ಬಂಟ್ವಾಳ: ಎರಡು ವಾಹನಗಳ ನಡುವೆ ಡಿಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಹೊಯಿಕೈ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ಬಾರೆಕಾಡು ನಿವಾಸಿ ಇರ್ಶಾದ್ , ಬಾರೆಕಾಡು ಶಾಹಿಲ್ ಹಾಗೂ ಬಂಟ್ವಾಳ ನಿವಾಸಿಗಳಾದ ಧನುಷ್ ಆಚಾರ್ಯ ಹಾಗೂ ಕೀರ್ತನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಕಸಬಾ ಗ್ರಾಮದ ತುಂಬ್ಯಾ ಜಂಕ್ಷನ್ ಬಳಿ ಬೈಕ್ ಮತ್ತು ಆಟೋ ರಿಕ್ಷಾಕ್ಕೆ ಅಪಘಾತ ಉಂಟಾದ ಕಾರಣಕ್ಕೆ ಸ್ಥಳಕ್ಕೆ ಬಂದ ಸ್ಥಳೀಯ ಯುವಕರು ಮತ್ತು ಆಟೋ ರಿಕ್ಷಾ ಸಂಬಂಧಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

You may also like

Leave a Comment