Belthangdi :ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ವೇಳೆ ನರ್ಸ್ ಗಳ ನಿರ್ಲಕ್ಷದಿಂದ ಸುಮಾರು ಒಂದುವರೆ ತಿಂಗಳ ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ (Belthangdi )ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು, ಧರ್ಮಸ್ಥಳದ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ ಅಂಶಿಕಾ ಎಂಬ ಒಂದುವರೆ ವರ್ಷದ ಕಂದಮ್ಮ ಬೆಳ್ತಂಗಡಿ ಆಸ್ಪತ್ರೆಯಲ್ಲಿ ನರ್ಸ್ ಗಳ ನಿರ್ಲಕ್ಷದಿಂದ ಸಾವನ್ನಪ್ಪಿದೆ. ಈ ದುರ್ಘಟನೆ ನಡೆದ ಬೆನ್ನಲ್ಲೇ ಬೆಳ್ತಂಗಡಿಯ ಮಾಜಿ ಶಾಸಕರಾದಂತಹ ವಸಂತ ಬಂಗೇರ ಅವರು ಆಸ್ಪತ್ರೆಗೆ ಹೋಗಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಗುವಿನ ತಂದೆಗೆ ಪೋಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಹೇಳಿದ್ದಾರೆ.
ಅಂದಹಾಗೆ ನೆರಿಯಾದ ತನ್ನ ಅಕ್ಕನ ಮನೆಯಲ್ಲಿ ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ ಅವರು ತಮ್ಮ ಮಗುವಿಗೆ ಕಫದ ಸಮಸ್ಯೆ ಕಾಣಿಸಿಕೊಂಡ ಕಾರಣ ಇಂದು ಮಧ್ಯಾಹ್ನ ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲೆ ಮಾಡಿದ್ದಾರೆ. ಆದರೆ ವೈದ್ಯರು ಇಲ್ಲದ ವೇಳೆ ನರ್ಸ್ ಗಳು ಮಗುವಿಗೆ ಇಂಜೆಕ್ಷನ್ ಮಾಡಿದ್ದಾರೆ. ಇಂಜೆಕ್ಷನ್ ಮಾಡಿದ ಕೆಲ ಸಮಯದಲ್ಲಿ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಸರಿಯಾದ ದಿಕ್ಕಿನಲ್ಲಿ ಈ ಗಿಡ ಇಟ್ಟರೆ, ನಿಮ್ಮ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತೆ!
