Home » ಬೆಳ್ತಂಗಡಿ: ಜಿಲ್ಲೆಯಾದ್ಯಂತ ಬಿಲ್ಲವರ ಆಕ್ರೋಶಕ್ಕೆ ಕಾರಣವಾದ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಸಚಿನ್ ವರ್ಗಾವಣೆಗೆ ತಡೆ!!

ಬೆಳ್ತಂಗಡಿ: ಜಿಲ್ಲೆಯಾದ್ಯಂತ ಬಿಲ್ಲವರ ಆಕ್ರೋಶಕ್ಕೆ ಕಾರಣವಾದ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಸಚಿನ್ ವರ್ಗಾವಣೆಗೆ ತಡೆ!!

0 comments

ಕಳೆದ ಒಂದೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತನ್ನದೇ ಹವಾ ಸೃಷ್ಟಿಸಿದ್ದ, ಅಧಿಕಾರದ ಮದದಲ್ಲಿ ರಾತ್ರೋ ರಾತ್ರಿ ಸುಳ್ಳು ಆರೋಪ ಹೊರಿಸಿ ವ್ಯಕ್ತಿಯೊರ್ವರ ಮನೆಗೆ ಅಕ್ರಮ ಪ್ರವೇಶ ನಡೆಸಿ ದಾಂಧಲೆ ನಡೆಸಿದ್ದ, ಅಕ್ರಮ ಮರ ಕಡಿದ ಪ್ರಕರಣದ ವರದಿಗೆ ತೆರಳಿದ್ದ ಪತ್ರಕರ್ತರಿಗೆ ಬೆದರಿಕೆ ಒಡ್ಡಿದ್ದ ಜಂಭದ ಕೋಳಿಯಂತೆ ತನ್ನ ಕೆಳ ಮಟ್ಟದ ಪ್ರಾಮಾಣಿಕ ಅಧಿಕಾರಿಗಳನ್ನು ಕೆಲಸದಾಳುಗಳಂತೆ ಕಾಣುವ, ಜಾತಿ ವಿಚಾರದಲ್ಲೂ ಹಲವು ಚರ್ಚೆಗಳಿಗೆ ಕಾರಣವಾಗಿದ್ದ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಸಚಿನ್ ವರ್ಗಾವಣೆಯನ್ನು ಸರ್ಕಾರ ತಡೆ ಹಿಡಿದಿದ್ದು,ಆ ಮೂಲಕ ವರ್ಗಾವಣೆಗೆ ಆದೇಶಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಡ ಹೇರಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸಂಧ್ಯಾ ಮಾಡಿದ್ದ ಆರೋಪ ಹುಸಿಯಾಗಿದೆ.

ಏನಿದು ಪ್ರಕರಣ: ಕಳೆದ ಕೆಲ ದಿನಗಳಿಂದ ಸಂಧ್ಯಾ ವರ್ಗಾವಣೆಗೆ ಆದೇಶಿಸುವಂತೆ ಮುಖ್ಯಮಂತ್ರಿಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೂ, ಈ ಪತ್ರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬರೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಗ್ಗೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಸಾರ್ವಜನಿಕರ ಅನುಮಾನವೇ ಗೆದ್ದಿತ್ತು.

ಶಾಸಕರು ಮುಖ್ಯಮಂತ್ರಿಗೆ ಬರೆದಿದ್ದಾರೆ ಎನ್ನಲಾದ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪತ್ರ

ಇದರಂತೆ ಉಡುಪಿ ಹಾಗೂ ದಕ ಜಿಲ್ಲೆಯ ಪ್ರಭಾರ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರನ್ನು ಬೀದರ್ ಜಿಲ್ಲೆಯ ನೌಬಾದ್ ನಲ್ಲಿರುವ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾಯಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶಿಸಿ ಸಹಿ ಹಾಕಿದ್ದ ಪತ್ರವೂ ವೈರಲ್ ಆಗಿದೆ.

ಈ ಬಗ್ಗೆ ನನ್ನ ವರ್ಗಾವಣೆಗೆ ಶಾಸಕರು ಒತ್ತಡ ಹೇರಿದ್ದಾರೆ, ರಾಜಕೀಯ ದ್ವೇಷದಿಂದ ನನ್ನನ್ನು ವರ್ಗಾಯಿಸಲಾಗಿತ್ತದೆ ನನಗೆ ನ್ಯಾಯ ಕೊಡಿಸಬೇಕೆಂದು ಸಂಧ್ಯಾ ಬೆಳ್ತಂಗಡಿಯ ಬಿಲ್ಲವ ಸಂಘಕ್ಕೆ, ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೆಲ ವ್ಯಾಪ್ತಿಗಳಲ್ಲಿ ಅಕ್ರಮ ಮರ ಸಾಗಾಟ, ಮರಗಳ್ಳರ ಹಾವಳಿಯನ್ನು ದಾಳಿಯ ಮೂಲಕ ಮಟ್ಟ ಹಾಕಿದ್ದ ಕಾರಣಕ್ಕಾಗಿ ಶಾಸಕರು ನನ್ನ ವರ್ಗಾವಣೆಗೆ ಒತ್ತಡ ಹೇರಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಬಿಲ್ಲವ ಸಂಘದ ಕೆಲವರು ವರ್ಗಾವಣೆಯ ವಿಚಾರದಲ್ಲಿ ಜಾತಿ ತರುವುದು ಸರಿಯಲ್ಲ, ಇದೆಲ್ಲಾ ಕರ್ತವ್ಯದ ಅವಧಿಯಲ್ಲಿ ನಡೆಯುವುದು ಸಾಮಾನ್ಯ ಎಂದು ಸಂಧ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಜಿಲ್ಲೆಯಲ್ಲಿ ಬಿಲ್ಲವ ಸಂಘದ ಆಕ್ರೋಶದ ಬೆನ್ನಲ್ಲೇ ಸರ್ಕಾರ ಸಂಧ್ಯಾ ವರ್ಗಾವಣೆಗೆ ತಡೆ ಹಿಡಿದು, ಈಗಿನ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಲು ಆದೇಶಿಸಿದೆ ಎಂದು ತಿಳಿದುಬಂದಿದೆ.

ಕಳೆದ ಒಂದು ವರ್ಷಗಳ ಹಿಂದೆ ಕಲ್ಲಾಜೆ ಪ್ರಸಾದ್ ಎಂಬವರು ಅರಣ್ಯದಲ್ಲಿ ನಡೆದಿದ್ದ ಅಕ್ರಮ ಮರಗಳ ಮರಣಹೋಮದ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು,ಈ ವಿಚಾರದಲ್ಲಿ ಶಾಮೀಲಾಗಿದ್ದ ಅಧಿಕಾರಿಗಳ ಪರವಾಗಿ ನಿಂತ ಸಂಧ್ಯಾ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ವರದಿಗೆ ತೆರಳಿದ್ದ ಕಡಬದ ಪತ್ರಕರ್ತರಿಗೆ ಬೆದರಿಕೆಯನ್ನು ಹಾಕಿ ಅಧಿಕಾರದ ಮದ ಪ್ರದರ್ಶಿಸಿದ್ದರು. ಬಳಿಕ ಪ್ರಸಾದ್ ಮನೆಗೆ ದಾಳಿ ನಡೆಸಿ ದಾಂಧಲೆ ನಡೆಸಿ ಸುಳ್ಳು ಆರೋಪ ಹೊರಿಸಿದ್ದ ಅಧಿಕಾರಿ ಸಂಧ್ಯಾ, ಮನೆಯವರ ಉಪವಾಸ ಧರಣಿಗೂ ಕಾರಣವಾಗಿದ್ದರು. ಸಂಧ್ಯಾ ವರ್ಗಾವಣೆಯ ವಿಚಾರ ಬಯಲಾಗುತ್ತಿದ್ದಂತೆ ಆಕೆಯ ರೌದ್ರ ಅವತಾರ ಕಂಡಿದ್ದ ಆತ್ಮಗಳಿಗೆ ಸಂತೋಷವಾಗಿತ್ತು.

You may also like

Leave a Comment