Home » Belthangady Road Mashup: ಬೆಳ್ತಂಗಡಿ; ಕಾರು ಅಪಘಾತ; ಓರ್ವ ಸಾವು

Belthangady Road Mashup: ಬೆಳ್ತಂಗಡಿ; ಕಾರು ಅಪಘಾತ; ಓರ್ವ ಸಾವು

by Mallika
1 comment
Belthangady Road Mashup

Belthangady Road Mashup: ಕಾರೊಂದು ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆಯೊಂದು ಮಾ.29 ರ ಮಧ್ಯಾಹ್ನ ಸಂಭವಿಸಿದೆ. ಕುವೆಟ್ಟು ಗ್ರಾಮದ ಗುರುವಾಯನಕೆರೆ ಸಮೀಪ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ.

ಲ್ಯಾಲ ಮಾರ್ನಿಂಗ್‌ ಸ್ಟಾರ್‌ನಿವಾಸಿ ವಿ.ವಿ.ಮ್ಯಾಥ್ಯೂ ಅವರ ಪುತ್ರ ಪ್ರೈಸ್‌ ಮ್ಯಾಥ್ಯೂ (32) ಎಂಬುವವರು ಸಾವನ್ನಪ್ಪಿದ್ದು, ಸಹ ಪ್ರಯಾಣಿಕ ಧರ್ಮಸ್ಥಳ ನಾರ್ಯ ನಿವಾಸಿ ನಿತಿನ್‌ ಸಿ.ಆರ್.‌ (28) ಮತ್ತು ಧರ್ಮಸ್ಥಳ ಗ್ರಾಮದ ಅರುಣ್‌ ಜೆ (26) ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಬರುತ್ತಿದ್ದ ಕಾರು ಶಕ್ತಿನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ನಂತರ ರಸ್ತೆಯ ಎಡಬದಿಯ ಬರೆಗೆ ಡಿಕ್ಕಿ ಹೊಡೆದಿದೆ. ನಂತರ ಮಗುಚಿ ಬಿದ್ದಿದೆ. ಕಾರಿನಲ್ಲಿದ್ದ ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಗಾಯಗೊಂಡಿದ್ದ ಪ್ರೈಸ್‌ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆಂದು ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೈಸ್‌ ಮ್ಯಾಥ್ಯೂ ಅವರಿಗೆ ಇದೇ ಜನವರಿಯಲ್ಲಿ ವಿವಾಹವಾಗಿದ್ದು, ಗುಡ್‌ಪ್ರೈಡೇ ದಿನವೇ ತಮ್ಮ ಮಗನ ಸಾವಿನ ಸುದ್ದಿ ಕೇಳಿ ಮನೆಮಂದಿ ಆಘಾತಗೊಂಡಿದ್ದಾರೆ. ಮೃತರ ಮನೆಗೆ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಸಾಂತ್ವನ ಹೇಳಿದರು.

ಇದನ್ನೂ ಓದಿ: Holiday: ರಾಜ್ಯಾದ್ಯಂತ ಮತದಾನ ದಿನದಂದು ಸಾರ್ವತ್ರಿಕ ರಜೆ

You may also like

Leave a Comment