Home » ಬೆಳ್ತಂಗಡಿ : ಬೆಳ್ಳಂಬೆಳಗ್ಗೆ ಉಜಿರೆ ಬಳಿ ವ್ಯಕ್ತಿ ಸಾವು !!

ಬೆಳ್ತಂಗಡಿ : ಬೆಳ್ಳಂಬೆಳಗ್ಗೆ ಉಜಿರೆ ಬಳಿ ವ್ಯಕ್ತಿ ಸಾವು !!

0 comments

Belthangady death news: ಇತ್ತಿಚೆಗೆ ಸಾವಿನ (death) ಸಂಖ್ಯೆ ಹೆಚ್ಚಾಗಿದೆ. ಇದೀಗ ಬೆಳ್ಳಂಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ (ujire) ವ್ಯಕ್ತಿಯೊಬ್ಬರು ನೋಡನೋಡುತ್ತಿದ್ದಂತೆ ಸಾವನ್ನಪ್ಪಿದ್ದಾರೆ.

ವ್ಯಕ್ತಿಯನ್ನು ಧರ್ಮಸ್ಥಳದ ನೇತ್ರಾವತಿ (dharmastala, nethravathi) ನಿವಾಸಿ ಎಂದು ಗುರುತಿಸಲಾಗಿದೆ. ಈತ ಧರ್ಮಸ್ಥಳದಿಂದ ಬಸ್ಸಿನಲ್ಲಿ ಬಂದು ಉಜಿರೆ ಬಸ್ ಸ್ಟಾಂಡ್ ಬಳಿ ಇಳಿದು, ಅಲ್ಲೇ ಬಸ್ ಸ್ಟಾಂಡ್ ನಲ್ಲಿ ಕುಳಿತಿದ್ದಾರೆ. ಈ ವೇಳೆ ಏಕಾಏಕಿ ಈತನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ವ್ಯಕ್ತಿ ಉಸಿರಾಡಲು ಕಷ್ಟಪಡುತ್ತಿದ್ದದ್ದನ್ನು ಕಂಡ ಅಲ್ಲೇ ಕಾಲೇಜಿಗೆ ಹಾದು ಹೋಗುತ್ತಿದ್ದ ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ. ಆತನಿಗೆ ನೀರು ಕೊಟ್ಟು ಸಹಾಯ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ವ್ಯಕ್ತಿಯ ಆರೋಗ್ಯ ತೀರಾ ಹದಗೆಟ್ಟಿತ್ತು. ಇದರಿಂದಾಗಿ ಆತ ಅಲ್ಲೇ ಬಸ್ ಸ್ಟಾಂಡ್ ನಲ್ಲಿಯೇ (ujire busstand) ನೋಡನೋಡುತ್ತಿದ್ದಂತೆ ಸಾವನ್ನಪ್ಪಿದ್ದಾರೆ (Belthangady death news).

ಇಷ್ಟರಲ್ಲಾಗಲೇ ಸ್ಥಳಿಯರು ಸ್ಥಳಕ್ಕೆ ಧಾವಿಸಿದ್ದರು. ಅಶ್ಚರ್ಯಚಕಿಚರಾಗಿ ನೋಟ ಬೀರಿದ್ದರು. ನಂತರ ಪೋಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬೆಳ್ತಂಗಡಿಯ ಹೊಯ್ಸಳ ಪೊಲೀಸರು ಭೇಟಿ ನೀಡಿದ್ದಾರೆ. ಶವವನ್ನು ಮರಣೊತ್ತರ ಪರೀಕ್ಷೆಗೆ ಬೆಳ್ತಂಗಡಿ (belthangady) ಆಸ್ಪತ್ರೆಗೆ ಸಾಗಿಸಲಾಗಿದೆ.

You may also like

Leave a Comment