Home » ಬೆಳ್ತಂಗಡಿ: ಶೌರ್ಯ ಸಂಚಲನ ಕಾರ್ಯಕ್ರಮದ ಹಾರಿಕಾ ಮಂಜುನಾಥ್ ಭಾಷಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಪಮಾನ | ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಶೌರ್ಯ ಸಂಚಲನ ಕಾರ್ಯಕ್ರಮದ ಹಾರಿಕಾ ಮಂಜುನಾಥ್ ಭಾಷಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಪಮಾನ | ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

0 comments

ಡಿ 13 ರಂದು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃಮಂಡಳಿ ದುರ್ಗಾ ವಾಹಿನಿ ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ನಡೆದ ಶೌರ್ಯಸಂಚಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಹಾರಿಕಾ ಮಂಜುನಾಥ್ ವಿರುದ್ಧ ಇದೀಗ ‌ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾಷಣದಲ್ಲಿ ಮುಸ್ಲಿಮರನ್ನು ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಕಾರಣಕ್ಕೆ ಇವರ ಮೇಲೆ ದೂರು ದಾಖಲಾಗಿದೆ. ಪಿಲಿಚಾಮುಂಡಿ ಕಲ್ಲು ನಿವಾಸಿ ಶಬೀರ್ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಸಲ್ಮಾನರು ಮಸೀದಿಯಲ್ಲಿ 5 ಹೊತ್ತಿನ ನಮಾಜ್ ಗೆ ಆಹ್ವಾನ ಕೊಡುವ ಅಝಾನ್ ನಲ್ಲಿ ಕಾಫೀರ್ (ಮುಸ್ಲಿಂಮೇತರ) ಕೊಲ್ಲಲು ಕರೆ ನೀಡುತ್ತಿದ್ದಾರೆ ಎಂದು ಉದ್ರೇಕಕಾರಿ ಭಾಷಣ ಮಾಡಿ ಮುಸ್ಲಿಂ ಸಮುದಾಯಕ್ಕೆ ಅವಹೇಳನೆ ಹಾಗೂ ಹಿಂದೂ ಬಾಂಧವರನ್ನು ಮುಸ್ಲಿಂ ಸಮುದಾಯದ ವಿರುದ್ಧ ಉದ್ರೇಕಿಸಲು ಪ್ರಚೋದನಕಾರಿಯಾಗಿ ಭಾಷಣ ಮಾಡಿ ಕೋಮುದ್ವೇಷ ಮೂಡುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment