Sowjanya protest: ಯಾವಾಗ ನಮ್ಮ ಸ್ವರ ನಿಂತಾಗ, ಬಲಾಢ್ಯ ವ್ಯಕ್ತಿಗಳು ನಮ್ಮ ಎಲ್ಲಾ ದಾರಿಗಳೂ ಮುಚ್ಚಿ ಹೋದಾಗ ಕೈ ಸೋತು, ‘ ಅಯ್ಯೋ, ನನಗೆ ಯಾರೂ ಸಹಾಯ ಮಾಡುವವರು ಇಲ್ಲವೇ ?’ ಎಂದು ದೈನ್ಯ ಭಾವ ಮೂಡುವಾಗ ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುವುದು ಮಾನವ ಹಕ್ಕುಗಳ ಆಯೋಗ. ಇಂದು ಸೌಜನ್ಯ ಸಾವಿನ ಕುರಿತ ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹಕ್ಕುಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಗೀತಾ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.
ನಾನು ತುಳುನಾಡು ಮಗಳಾಗಿ ಬಂದಿದ್ದೇನೆ. ಮಗುವಿನ ನ್ಯಾಯ ಕೇಳಲು ಹೋದಾಗ ಇದು ಮುಗಿದ ಅಧ್ಯಾಯ ಅಂತಾರೆ ಗೃಹಮಂತ್ರಿಗಳು. ಹೈಕೋರ್ಟ್ ನಲ್ಲಿ ಮತ್ತು ಸುಪ್ರೀಂ ಕೋರ್ಟಿನ ಲಾಯರ್ ರೆಡಿ ಇದ್ದಾರೆ, ನಾವು ಬಿಡೋಲ್ಲ. ನಾವು ಅಮಿತ್ ಶಾಗೆ ಸೌಜನ್ಯಳ ಭೀಕರ ಸ್ಥಿತಿಯ ಫೋಟೋ ಕಳಿಸಿದ್ದೇವೆ. ಧರ್ಮಸ್ಥಳದ ಧರ್ಮಾಧಿಕಾರಿಗೆ ನಾಚಿಕೆ ಆಗಬೇಕು. ನಿಮ್ಮ ಊರಲ್ಲಿ ಯಾರೋ ಬಂದು 465 ಕೊಲೆ ಮಾಡಿ ಬಿಸಾಕಿ ಹೋಗ್ತಾರೆ ಅಂದ್ರೆ ನೀವು ಏನು ಮಾಡ್ತಾ ಇದ್ದೀರಿ. ನಿಮಗೆ ನಾಚಿಗೆ ಆಗಲ್ವಾ ಅಂತ ಗೀತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅತ್ಯಾಚಾರ ಅಂದ್ರೆ ಏನು ಅಂತ ಗೊತ್ತಾ ಮಹಿಳೆಯರೇ ಎಂದು ಕಿವಿಮಾತು ಹೇಳಿದರು
ತನಿಖಾಧಿಕಾರಿಗಳು ಮುಂದೆ ಬನ್ನಿ, ನಾವು ನಿಮ್ಮ ಜತೆ ಇದ್ದೇವೆ. ತನಿಖಾಧಿಕಾರಿಗಳು ಮುಂದೆ ಬನ್ನಿ. ಮುಂದೆ ನೀವು ಬಂದು ಸತ್ಯ ಹೇಳಿ ಅಂದಿದ್ದಾರೆ ಮಾನವ ಹಕ್ಕುಗಳ ಆಯೋಗದ ಅಂತಾರಾಷ್ಟ್ರೀಯ ಕಾರ್ಯದರ್ಶಿ
ನ್ಯಾಯ ಸಿಗುವ ತನಕ ನಿಮ್ಮ ಜತೆ ಇದ್ದೇನೆ ಎಂದು ಶ್ರೀಮತಿ ಗೀತಾ ಅವರು ಹೇಳಿದ್ದಾರೆ. ನ್ಯಾಯ ಸಿಗುವ ತನಕ ನಿಮ್ಮ ಜತೆ ಇದ್ದೇನೆ ಎಂದು ಶ್ರೀಮತಿ ಗೀತಾ ಅವರು ಹೇಳಿದ್ದಾರೆ.
