5
Sowjanya case : ಸೌಜನ್ಯ ಪ್ರಕರಣದ (Sowjanya case)ಮರುತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಭಾಗವಹಿಸಿ ಮಾತನಾಡಿದರು.

ಡಾ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಕೆಳಗಿಳಿಸಬೇಕು.ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ನಮ್ಮನ್ನು ಕರೆದುಕೊಂಡು ಹೋಗುವಂತೆ ಬಿಜೆಪಿ ಮುಖಂಡರ ಬಳಿ ಅವರು ಮನವಿ ಮಾಡಿದರು.
ಈ ಸಭೆಯಲ್ಲೂ ಕುಸುಮಾವತಿ ಅವರು ಡಾ.ಹೆಗ್ಗಡೆ ಕುಟುಂಬದ ಮೇಲೆ ಗುರುತರ ಆರೋಪ ಮಾಡಿದರು.
ಸೌಜನ್ಯ ಪ್ರಕರಣದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಬೇಕು, ನಾನು ಅಥವಾ ಹರೀಶ್ ಪೂಂಜ ಆ ಕೆಲ್ಸ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾಗಿ ನ್ಯಾಯಕ್ಕೆ ಆಗ್ರಹ ಮಾಡ್ತೇವೆ ಎಂದು ವೇದವ್ಯಾಸ ಕಾಮತ್ ಹೇಳಿದರು.
