Home » ಬೆಳ್ತಂಗಡಿ : ಜೀರ್ಣೋದ್ಧಾರವಾಗುತ್ತಿರುವ ನಿಡಿಗಲ್ ದೇವಸ್ಥಾನದ ಗೋಡೆ ಕೆಡಹಿದ ಕಿಡಿಗೇಡಿಗಳು | ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ

ಬೆಳ್ತಂಗಡಿ : ಜೀರ್ಣೋದ್ಧಾರವಾಗುತ್ತಿರುವ ನಿಡಿಗಲ್ ದೇವಸ್ಥಾನದ ಗೋಡೆ ಕೆಡಹಿದ ಕಿಡಿಗೇಡಿಗಳು | ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ

by Praveen Chennavara
0 comments

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸೇತುವೆಯ ಹತ್ತಿರದಲ್ಲಿರುವ ಪುರಾತನ ಕಾಲದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರವು ಭರದಿಂದ ಸಾಗುತ್ತಿದ್ದು ಇದೀಗ ಸುತ್ತು ಪೌಳಿಯ ಗೋಡೆಯ ಕೆಲಸವು ನಡೆಯುತ್ತಿದ್ದು ಇದನ್ನು ಬುಧವಾರ ರಾತ್ರಿ ಸರಿ ಸುಮಾರು 8 ಗಂಟೆಯ ರಾತ್ರಿ ಹೊತ್ತಿಗೆ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಧಾವಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಊರಿನ ದೇವಸ್ಥಾನದ ಭಕ್ತಾದಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃತ್ಯವೆಸಗಿದ ಅವರನ್ನು ಆದಷ್ಟು ಬೇಗ ಬಂಧಿಸಬೇಕು, ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬೇಕು ಉಗ್ರ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಎಚ್ಚರಿಕೆ ನೀಡಿದೆ.

You may also like

Leave a Comment