Home » ಬೆಳ್ತಂಗಡಿ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು NIA ತನಿಖೆಗೊಳಪಡಿಸಲು ವಿ.ಹಿಂ.ಪರಿಷದ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ!

ಬೆಳ್ತಂಗಡಿ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು NIA ತನಿಖೆಗೊಳಪಡಿಸಲು ವಿ.ಹಿಂ.ಪರಿಷದ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ!

0 comments

ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಇಂದು ರಾಷ್ಟ್ರವ್ಯಾಪ್ತಿ ಪ್ರಕರಣ ಆಗಿದೆ. ಶಾಲಾ ಕಾಲೇಜುಗಳು ಪ್ರಾರಂಭವಾದರೂ ಕೂಡಾ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ತಾವು ಹಿಜಾಬ್ ಧರಿಸಿಯೇ ಬರುತ್ತೇವೆ ಎಂದು ಕೆಲವು ಮಕ್ಕಳ ವಾದ‌ವಾಗಿದೆ.

ಈ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿ.ಹಿಂ.ಪರಿಷತ್ ಬೆಳ್ತಂಗಡಿಯ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಹಿಜಾಬ್ ಪ್ರಕರಣವನ್ನು NIA ತನಿಖೆಗೆ ಮಾಡಬೇಕೆಂದು ಆಗ್ರಹಿಸಿ ಪತ್ರವನ್ನು ಮಾನ್ಯ ತಹಶೀಲ್ದಾರರಿಗೆ ನೀಡಿದ್ದಾರೆ.

” ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ಇದೊಂದು ಜಿಹಾದಿನ ಷಡ್ಯಂತ್ರ, ಮುಸಲ್ಮಾನ ವಿಧ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ.ಈ ಪ್ರಕರಣದ ಹಿಂದೆ PFI – SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದ್ದು, ಅಲ್ಲದೆ ಇದರ ಹಿಂದೆ ಪಾಕಿಸ್ತಾನ, ತಾಲಿಬಾನಿನಂತಹ ಇಸ್ಲಾಂ ಮೂಲಬೂತವಾಧಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ. ಕೋರ್ಟ್ ಕೊಟ್ಟ ತೀರ್ಪನ್ನು ಪಾಲಿಸದೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದು ಇವರ ಜಿಹಾದಿ ಮಾನಸಿಕತೆಯನ್ನು ತೋರಿಸುತ್ತಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ಇರುವ ಸಂಶಯ ವ್ಯಕ್ತವಾಗುತ್ತಿದ್ದು ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿನಿಯರನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತು ಈ ಸಂಚನ್ನು ರೂಪಿಸಿದವರ ವಿರುದ್ಧ NIA ( ರಾಷ್ಟ್ರೀಯ ತನಿಖಾ ದಳ ) ಮುಖಾಂತರ ತನಿಖೆಯ ನಡೆಸಲು ಕ್ರಮ ಕೈಗೊಳ್ಳಬೇಕೆಂದು” ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿ.ಹಿಂ.ಪ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರಾದ ದಿನೇಶ್ ಚಾರ್ಮಾಡಿ, ಉಪಾಧ್ಯಕ್ಷರಾದ ಸತೀಶ್ ನೆರಿಯ,ಬಜರಂಗದಳ ಪ್ರಖಂಡ ಸಂಯೋಜಕರಾದ ಸಂತೋಷ್ ಅತ್ತಾಜೆ ಸಹಸಂಯೋಜಕರಾದ ರಿಜೇಶ್ ಗುರುವಾಯನಕೆರೆ ಉಪಸ್ಥಿತಿತರಿದ್ದರು.

You may also like

Leave a Comment