Home » ಎ.1 : ಚೆನ್ನಾವರ ಶಾಲೆಯಲ್ಲಿ ನಿವೃತ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ಎ.1 : ಚೆನ್ನಾವರ ಶಾಲೆಯಲ್ಲಿ ನಿವೃತ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭ

by Praveen Chennavara
0 comments

ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲೆಯಲ್ಲಿ 19ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಗುರು ಶಾಂತಾ ಕುಮಾರಿ ಎನ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಎ.1 ರಂದು ಮಧ್ಯಾಹ್ನ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ವಹಿಸುವರು.ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಅವರು ಕಾರ್ಯಕ್ರಮ ಉದ್ಘಾಟಿಸುವರು.ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಪುಸ್ತಕ ಬಿಡುಗಡೆ
ಇದೇ ಸಂಧರ್ಭದಲ್ಲಿ ಶಾಂತಾ ಕುಮಾರಿ ಎನ್ ಅವರ ಕನಸು-ನನಸು ಕವನ ಸಂಕಲನ ಹಾಗೂ ಚೆನ್ನಾವರ ಶಾಲಾ ವಾರ್ಷಿಕ ಸಂಚಿಕೆ ಚಿಣ್ಣರ ಚಿಗುರು ಬಿಡುಗಡೆ ನಡೆಯಲಿದೆ. ಬೆಳಿಗ್ಗೆ 11ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment