Home » ಹತ್ಯೆಯಾದ ಜಲೀಲ್‌ ಮೃತದೇಹ ಆಸ್ಪತ್ರೆಯಿಂದ ಮನೆಗೆ ರವಾನೆ : ಪಾರ್ಥೀವ ಶರೀರದ ದರ್ಶನಕ್ಕೆ ನೂರಾರು ಜನ

ಹತ್ಯೆಯಾದ ಜಲೀಲ್‌ ಮೃತದೇಹ ಆಸ್ಪತ್ರೆಯಿಂದ ಮನೆಗೆ ರವಾನೆ : ಪಾರ್ಥೀವ ಶರೀರದ ದರ್ಶನಕ್ಕೆ ನೂರಾರು ಜನ

0 comments

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್‌ ಜಲೀಲ್ ಮೃತದೇಹ ಮನೆಗೆ ತಲುಪಿದ್ದು, ಪಾರ್ಥೀವ ಶರೀರದ ದರ್ಶನಕ್ಕಾಗಿ ನೂರಾರು ಜನರು ಭಾಗಿಯಾಗಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಅಂಬುಲೆನ್ಸ್‌ ಮೂಲಕ ಮೃತದೇಹ ಜಲೀಲ್‌ ಅವರ ಮನೆಗೆ ಕರೆತರಲಾಯಿತು.

ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಂತಿಮ ವಿಧಿವಿಧಾನದ ಬಳಿಕ ಅಂತ್ಯ ಸಂಸ್ಕಾರವನ್ನು ಕೂಳೂರು ಪಂಜಿಮೊಗರಿನ ಜುಮಾ ಮಸೀದಿ ವಠಾರದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ. ಪೊಲೀಸ್‌ ಕಮೀಷನರ್‌ ಎನ್‌.ಶಶಿಕುಮಾರ್‌ ಸಹಿತ ಹಿರಿಯ ಪೊಲೀಸ್‌ ಅಧಿಕಾರಿಗಳು ಭದ್ರತೆ ವಹಿಸಲಿದ್ದಾರೆ.

You may also like

Leave a Comment