Home » Punjalkatte: ಸ್ಕೂಟರ್‌ಗೆ ಬಸ್‌ ಡಿಕ್ಕಿ; ವಿದ್ಯಾರ್ಥಿನಿಗೆ ಗಾಯ, ಆಸ್ಪತ್ರೆಗೆ ದಾಖಲು!!

Punjalkatte: ಸ್ಕೂಟರ್‌ಗೆ ಬಸ್‌ ಡಿಕ್ಕಿ; ವಿದ್ಯಾರ್ಥಿನಿಗೆ ಗಾಯ, ಆಸ್ಪತ್ರೆಗೆ ದಾಖಲು!!

0 comments

Punjalkatte: ಸರಕಾರಿ ಬಸ್‌ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಗಂಭಿರವಾಗಿ ಗಾಯಗೊಂಡ ಘಟನೆಯೊಂದು ಜ.10 ಬುಧವಾರ ಬೆಳಿಗ್ಗೆ ವಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಗೋಪಾಲ ಸಫಲ್ಯ ಅವರ ಪುತ್ರಿ ವಾಮದಪದವು ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಗಾಯಗೊಂಡಿದ್ದು, ಮಂಗಳೂರು ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧರ್ಮಸ್ಥಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಸರಕಾರಿ ಬಸ್‌ ಇನ್ನೊಂದು ಬಸ್ಸನ್ನು ಓವರ್‌ಟೇಕ್‌ ಮಾಡುವ ಧಾವಂತದಲ್ಲಿ ಬಲಭಾಗದಲ್ಲಿ ಬಂದು ಸ್ಕೂಟರ್‌ಗೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.

You may also like

Leave a Comment