Dakshina Kannada: ಕೋಳಿ ಮಾಂಸ ತಗೊಂಡು ಬಂದು, ಕೆಎಸ್ಆರ್ಟಿಸಿಯಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕನನ್ನು ಬಸ್ ಸಮೇತ ಚಾಲಕ ಪೊಲೀಸ್ ಸ್ಟೇಷನ್ಗೆ ಕರೆದೊಯ್ದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈಗ ಇದೀಗ ತೆಂಗಿನೆಣ್ಣೆ ವಿಚಾರದಲ್ಲಿ ಹೊಸದೊಂದು ವಿಚಾರವೊಂದು ಬೆಳಕಿಗೆ ಬಂದಿದೆ (Dakshina Kannada) . ಈ ಘಟನೆ ಭಾನುವಾರ ನಡೆದಿದ್ದು, ತೆಂಗಿನೆಣ್ಣೆಯನ್ನು ಹಿಡಿದುಕೊಂಡು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬಸ್ನಿಂದ ಇಳಿಸಿದ ಘಟನೆಯೊಂದು ಬಿ.ಸಿ.ರೋಡಿನಲ್ಲಿ ನಡೆದಿದೆ.
ಮಂಗಳೂರು-ಹಾಸನ ಬಸ್ನಲ್ಲಿ ಈ ಘಟನೆ ನಡೆದಿದೆ. ಕೈಚೀಲವೊಂದನ್ನು ಹಿಡಿದುಕೊಂಡು ಮಹಿಳೆಯೋರ್ವರು ಕೆಎಸ್ಆರ್ಟಿಸಿ ಬಸ್ ಹತ್ತಿದ್ದು, ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ತೆಂಗಿನೆಣ್ಣೆಯನ್ನು ನೋಡಿ ಇದು ಏನಮ್ಮಾ ಎಂದು ಕೇಳಿದ್ದಾರೆ. ಮೇಲ್ನೋಟಕ್ಕೆ ಅದು ತೆಂಗಿನೆಣ್ಣೆ ಎಂದು ಗೊತ್ತಾದರೂ, ಕಂಡಕ್ಟರ್ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ, ʼಇದು ಬಾಂಬ್ʼ ಎಂದು ಹೇಳಿದ್ದಾರೆ. ತೆಂಗಿನೆಣ್ಣೆ ಎಂದು ತಿಳಿದ ನಿರ್ವಾಹಕ ಆಯಿಲ್ ಪದಾರ್ಥಗಳನ್ನು ಬಸ್ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಮಹಿಳೆಯ ಜೊತೆ ವಾಗ್ವಾದ ನಡೆಸಿದ್ದಾನೆ. ಆದರೆ ಮಹಿಳೆ ಈ ಮಾತನ್ನು ಕೇಳಲಿಲ್ಲ. ಪಟ್ಟುಬಿಡದ ಕಂಡಕ್ಟರ್ ಮಂಗಳೂರಿನಿಂದ ಬಿ.ಸಿ.ರೋಡ್ ತಲುಪುತ್ತಿದ್ದಂತೆ ಒತ್ತಾಯದಿಂದ ಮಹಿಳೆಯನ್ನು ಬಸ್ನಿಂದ ಇಳಿಸಿದ್ದಾನೆ.
ಆಗ ಮಹಿಳೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎಣ್ಣೆ ಕ್ಯಾನ್ ಬಸ್ನಲ್ಲೇ ಇತ್ತು, ಮಹಿಳೆ ಕೆಳಗೆ ಇಳಿದಿದ್ದಾರೆ. ಬಸ್ನಿಂದ ಮದ್ಯವಯಸ್ಸಿನ ಮಹಿಳೆಯನ್ನು ಇಳಿಸಿದ ಕಂಡಕ್ಟರ್ ವರ್ತನೆಗೆ ಸಾರ್ವಜನಿಕರು ಕೂಡಾ ಸ್ಥಳದಲ್ಲಿ ಜಮಾಯಿಸಿದ್ದರು. ಮಹಿಳೆಯ ದೂರಿನನ್ವಯ ಟ್ರಾಫಿಕ್ ಪೊಲೀಸ್ ಅವರು ಬಸ್ ಚಾಲಕನಲ್ಲಿ ಬಸ್ಸನ್ನು ಬದಿಗೆ ಸರಿಸಿ ಸ್ವಲ್ಪ ಕಾಲ ನಿಲ್ಲುವಂತೆ ಕೇಳಿಕೊಂಡರು. ನಂತರ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್.ಐ. ರಾಮಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ. ನಂತರ ಫೋನ್ ಮೂಲಕ ನಿರ್ವಾಹಕನಿಗೆ ಬುದ್ಧಿ ಮಾತು ಹೇಳಿದ್ದಾರೆ. ಬಳಿಕ ಸಂತ್ರಸ್ತ ಮಹಿಳೆಯನ್ನು ಅದೇ ಬಸ್ನಲ್ಲಿ ತೆಂಗಿನೆಣ್ಣೆ ಸಹಿತ ಹಾಸನಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕೈಗೆತ್ತಿಕೊಂಡ ಕೆಲಸ ಕಾರ್ಯಗಳು ಆಶಾದಾಯಕವಾಗಿ ಸಾಗುತ್ತದೆ, ನಿರುದ್ಯೋಗಿಗಳಿಗೆ ಸೀಮಿತ ಅವಕಾಶ!
