Home » Mangaluru Missing: ಹಣ ತುಂಬಲು ಬ್ಯಾಂಕ್’ಗೆ ತೆರಳಿದ ವ್ಯಕ್ತಿ ನಾಪತ್ತೆ !!

Mangaluru Missing: ಹಣ ತುಂಬಲು ಬ್ಯಾಂಕ್’ಗೆ ತೆರಳಿದ ವ್ಯಕ್ತಿ ನಾಪತ್ತೆ !!

1 comment
Mangaluru Missing

Mangaluru Missing : ಬ್ಯಾಂಕಿಗೆ ಹಣ ತುಂಬಲು ತೆರಳಿದಂತಹ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ಹೌದು, ಮಂಗಳೂರಿನ(Mangaluru) ಬಂಟ್ಸ್‌ ಹಾಸ್ಟೆಲ್‌ ಸಮೀಪವಿರುವ ಬ್ಯಾಂಕ್‌ಗೆ ಹಣ ಜಮೆ ಮಾಡಲು ಹೋಗಿದ್ದ 42ರ ಪ್ರಾಯದ ಕೃಷ್ಣ ಪ್ರಸಾದ್‌ ಶೆಟ್ಟಿ(Krishna prasad shetty) ಎಂಬುವವರು ನಾಪತ್ತೆಯಾಗಿದ್ದಾರೆ(Mangaluru Missing ) . ಅಂದಹಾಗೆ ಇವರು ಶೇರು ಮಾರುಕಟ್ಟೆಯ ವ್ಯವಹಾರ ನಡೆಸುತ್ತಿದ್ದರೆಂದು ತಿಳಿದುಬಂದಿದೆ.

ದೊರೆತ ಮಾಹಿತಿ ಪ್ರಕಾರ ನ. 16ರಂದು ಮದ್ಯಾಹ್ನ 3.45ಕ್ಕೆ ಬ್ಯಾಂಕ್‌ಗೆ ಹಣ ತುಂಬಲು ಹೋಗಿದ್ದ ಕೃಷ್ಣ ಪ್ರಸಾದ್ ಅವರು ಸಂಜೆ 6ಕ್ಕೆ ಅವರ ತಂದೆಗೆ ಕರೆ ಮಾಡಿ ಶಿವಮೊಗ್ಗಕ್ಕೆ ಹೋಗುತ್ತಿದ್ದು, ನ. 17ರಂದು ಗೆಳೆಯರ ಜತೆಯಲ್ಲಿ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದರು. ಅಲ್ಲದೆ 6.30ಕ್ಕೆ ಶಿವಮೊಗ್ಗದ ಹೊಟೇಲ್‌ನಿಂದ ವೀಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಮರುದಿನ ಬೆಳಿಗ್ಗೆ ಕರೆಮಾಡಿದಾಗ ಫೋನ್ ರಿಸಿವ್ ಮಾಡಲಿಲ್ಲ. ಸ್ವಲ್ಪ ಸಮಯದ ಬಳಿಕ ಮೊಬೈಲ್ ನಲ್ಲಿ ಚಾರ್ಜ್ ಕಡಿಮೆ ಇದೆ ಎಂದು ಮೆಸೇಜ್ ಮಾಡಿದ್ದರು. ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: R Ashok: ವಿಪಕ್ಷ ನಾಯಕರಾಗಿ ಆಯ್ಕೆ ಆಗುತ್ತಿದ್ದಂತೆ ಮಹತ್ವದ ನಿರ್ಧಾರ ಮಾಡಿದ ಆರ್ ಅಶೋಕ್ !!

You may also like

Leave a Comment