4
Karkala: ಸಾಫ್ಟ್ವೇರ್ ಉದ್ಯೋಗಿ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳಲ್ಲಿ(Karkala) ನಡೆದಿದೆ. ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಚಾರ್ವಿ ಕೆಲವು ತಿಂಗಳಿನಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು.
ಕಾರ್ಕಳ ತಾಲೂಕಿನ ಕಲ್ಲೊಟ್ಟೆಯ ಸಂಪತ್ ಕುಮಾರ್ ಎಂಬವರ ಪುತ್ರಿ ಚಾರ್ವಿ (23) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಯುವತಿ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಸೋಮವಾರ ಈ ಘಟನೆ ನಡೆದಿದ್ದು, ಮನೆಯಲ್ಲೇ ಇದ್ದ ಚಾರ್ವಿ ಸಂಜೆ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Shimoga: ತುಂಬು ಗರ್ಭಿಣಿ ಆನೆಯ ಬಾಲಕ್ಕೆ ಮಚ್ಚಿನೇಟು!!!
