ಪಣಂಬೂರು ಬೀಚ್ನಲ್ಲಿ ಭಾನುವಾರ ಸಮುದ್ರಕ್ಕಿಳಿದಿದ್ದ ನಾಲ್ವರು ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದು, ಒಬ್ಬನನ್ನು ರಕ್ಷಿಸಲಾಗಿದೆ. ಉಳಿದ ಮೂವರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: Crime News: ಪ್ಯಾಸೆಂಜರ್ ನನ್ನು ಕೊಲೆಗೈದ ಆಟೋ ಚಾಲಕ : ಬೆಂಗಳೂರು ಪೊಲೀಸರಿಂದ ಆಟೋ ಚಾಲಕನ ಬಂಧನ
ಡೆಲಿವರಿ ಬಾಯ್ ಮಿಲನ್(20), ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಮತ್ತು ಖಾಸಗಿ ಕಂಪನಿ ಸೂಪರ್ವೈಸರ್ ನಾಗರಾಜ(24) ನಾಪತ್ತೆಯಾದವರು. ಬಜಪೆ ಪೋರ್ಕೊಡಿ ನಿವಾಸಿ ಮನೋಜ್ ಎಂಬವರನ್ನು ರಕ್ಷಿಸಲಾಗಿದೆ.
ಸುರತ್ಕಲ್ನ ವಿದ್ಯಾದಾಯಿನಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದ ಐದು ದಿನದಲ್ಲೇ ಮತ್ತೊಂದು ದುರಂತ ನಡೆದಿದೆ.
ಪಣಂಬೂರು ಬೀಚ್ನಲ್ಲಿ ಜಾನಪದ ಕಡಲೋತ್ಸವ ನಡೆಯುತ್ತಿದ್ದು ಭಾನುವಾರ ರಜೆ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಜೀವರಕ್ಷಕ ತಂಡವಿದ್ದರೂ, ಒಬ್ಬನನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಉಳಿದವರಿಗಾಗಿ ಪೊಲೀಸ್ ಇಲಾಖೆ, ಸ್ಥಳೀಯರ ಮೂಲಕ ಹುಡುಕಾಟ ನಡೆಸಲಾಗುತ್ತಿದೆ.
