Home » ದ.ಕ. : ಮತ್ತೆ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ,ಅಪಾರ ಪ್ರಮಾಣದ ಕೃಷಿ ನಾಶ

ದ.ಕ. : ಮತ್ತೆ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ,ಅಪಾರ ಪ್ರಮಾಣದ ಕೃಷಿ ನಾಶ

by Praveen Chennavara
1 comment
Dakshina Kannada

Dakshina Kannada  : ಸುಳ್ಯ ತಾಲೂಕಿನ ಮಂಡೆಕೋಲು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು, ಅಪಾರ ಪ್ರಮಾಣದ ಕೃಷಿ ನಾಶಪಡಿಸುತ್ತಿದೆ.

ಮಂಡೆಕೋಲು ಗ್ರಾಮದ ಮಾರ್ಗ ಬಳಿಯ ಹಮೀದ್‌ ಮಾವಜಿ ಎಂಬವರ ತೋಟಕ್ಕೆ ರಾತ್ರಿ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಸುಮಾರು 20ಕ್ಕೂ ಅಧಿಕ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಬಾಳೆ ಗಿಡಗಳನ್ನು ಹಾನಿ ಮಾಡಿದೆ. ದೇವರಗುಂಡದ ಹಲವು ಕೃಷಿಕರ ತೋಟಗಳಲ್ಲಿ ಬಾಳೆ, ತೆಂಗು, ಅಡಿಕೆ ಕೃಷಿ ನಾಶ ಮಾಡಿದೆ.

ಅರಣ್ಯ ಇಲಾಖೆಯವರು ಎರಡು ದಿನಗಳಿಂದ ರಾತ್ರಿ ಬಂದು ಆನೆಗಳನ್ನು ಕಾಡಿಗೆ ಅಟ್ಟಿಸಿದ್ದಾರೆ. ಆದರೆ ಹಗಲು ಹೊತ್ತಿನಲ್ಲಿ ಹೊಳೆಯ ಇನ್ನೊಂದು ಭಾಗವಾಗಿರುವ ಕೇನಾಜೆ ಕಾಡಿನಲ್ಲಿ ಬೀಡುಬಿಟ್ಟು ಸಂಜೆಯಾಗುತ್ತಲೇ ಹೊಳೆ ದಾಟಿ ತೋಟಕ್ಕೆ ದಾಂಗುಡಿಯಿಡುತ್ತಿವೆ ಎಂದು ಕೃಷಿಕರು ತಿಳಿಸಿದ್ದಾರೆ.

ಇದನ್ನೂ ಓದಿ: ಸರಕಾರಿ ಬಸ್ಸು ಮತ್ತು ಲಾರಿ ಮಧ್ಯೆ ಭೀಕರ ಅಪಘಾತ; ಐವರ ದಾರುಣ ಸಾವು!!!

You may also like

Leave a Comment