Home » ಸಾವಿನಲ್ಲೂ ಸಾರ್ಥಕತೆ ಮೆರೆದ ದ.ಕ ಬಿಜೆಪಿಯ ಭೀಷ್ಮ |ನೇತ್ರದಾನ ಮಾಡಿ ಮಾದರಿಯಾದ ಪುತ್ತೂರಿನ ಮಾಜಿ ಶಾಸಕ ‘ರಾಮ್ ಭಟ್ ‘

ಸಾವಿನಲ್ಲೂ ಸಾರ್ಥಕತೆ ಮೆರೆದ ದ.ಕ ಬಿಜೆಪಿಯ ಭೀಷ್ಮ |ನೇತ್ರದಾನ ಮಾಡಿ ಮಾದರಿಯಾದ ಪುತ್ತೂರಿನ ಮಾಜಿ ಶಾಸಕ ‘ರಾಮ್ ಭಟ್ ‘

by ಹೊಸಕನ್ನಡ
0 comments

‘ದ.ಕ ಜಿಲ್ಲಾ ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರು ನಿನ್ನೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ರಾಮ್ ಭಟ್ ರವರ ನಿಧನ ವಾರ್ತೆ ತಿಳಿದ ಬಳಿಕ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನಿಂದ ಬಂದ ವೈದ್ಯರು ರಾಮ್ ಭಟ್ ರವರ ಕಣ್ಣುಗಳನ್ನು ಪಡೆದುಕೊಂಡಿದ್ದಾರೆ.

ತಮ್ಮ ಮರಣದ ಬಳಿಕ ನೇತ್ರಗಳನ್ನು ದಾನ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

You may also like

Leave a Comment