Home » ಧರ್ಮಸ್ಥಳ ಅಕ್ರಮ ಮರಳುಗಾರಿಕೆ; ಗಣಿ ಇಲಾಖೆ ದಾಳಿ

ಧರ್ಮಸ್ಥಳ ಅಕ್ರಮ ಮರಳುಗಾರಿಕೆ; ಗಣಿ ಇಲಾಖೆ ದಾಳಿ

0 comments

Belthangady: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಅಜೆಕುರಿ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರಿಂದ ಸ್ಥಳಕ್ಕೆ ಮಂಗಳೂರು ಗಣಿ ಇಲಾಖೆ ತಂಡ ದಾಳಿ ಮಾಡಿದೆ. ನ.6 ರಂದು ದಾಳಿ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಗಣಿ ಇಲಾಖೆಯ ಗಿರೀಶ್‌ ಮೋಹನ್‌ ನೇತೃತ್ವದ ತಂಡ ಬುಧವಾರ ದಾಳಿ ಮಾಡಿದ್ದು, ಸ್ಥಳದಲ್ಲಿ ಮರಳುಗಾರಿಕೆ ನಡೆಯುತ್ತಿರುವುದು ಕಂಡು ಬಂದಿದೆ. ಹಾಗಾಗಿ ಮರಳುಗಾರಿಕೆಗೆಂದು ಬಳಕೆ ಮಾಡಲಾಗಿದ್ದ ನಾಲ್ಕು ಬೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ ರೂ.6 ಲಕ್ಷ ಆಗಿದ್ದು, ಸಂಗ್ರಹ ಮಾಡಲಾದ ಮರಳಿನ ಮೌಲ್ಯ ರೂ.25000 ಎಂದು ಅಂದಾಜು ಮಾಡಲಾಗಿದೆ.

ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.


ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಿರೀಶ್‌ ಮೋಹನ್‌, ಬೆಳ್ತಂಗಡಿ ತಹಶೀಲ್ದಾರ್‌ ಪೃಥ್ವಿ ಸಾನಿಕಂ, ಧರ್ಮಸ್ಥಳ ಗ್ರಾಮ ಪಂಚಾಯತ್‌ ಆಡಳಿತಾಧಿಕಾರಿ ಪ್ರದೀಪ್‌ ಕುಮಾರ್‌, ಗ್ರಾಮ ಸಹಾಯಕ ಗಿರೀಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

You may also like

Leave a Comment