Home » ಹಿರಿಯ ಸಾಹಿತಿ ಎನ್ ಎಸ್ ದೇವಿಪ್ರಸಾದ್ ಸಂಪಾಜೆ ಇನ್ನಿಲ್ಲ

ಹಿರಿಯ ಸಾಹಿತಿ ಎನ್ ಎಸ್ ದೇವಿಪ್ರಸಾದ್ ಸಂಪಾಜೆ ಇನ್ನಿಲ್ಲ

by Praveen Chennavara
0 comments

ಸುಳ್ಯ : ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ, ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಸಂಪಾಜೆ ಅವರು ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಇಂದು ಸಂಪಾಜೆಯ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕದ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿದೆ.

ಸಂಪಾಜೆ ಅವರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕೇಸ್ತರರಾಗಿದ್ದರು.

ಸಾಹಿತ್ಯ ಅಭಿಮಾನಿ ಹಾಗೂ ಲೇಖಕರೂ ಆಗಿದ್ದ ದೇವಿಪ್ರಸಾದ್ ಅವರ ಮನೆ ಅಪೂರ್ವ ಗ್ರಂಥಾಲಯವನ್ನು ಹೊಂದಿದೆ.

ಮೃತರು ಪತ್ನಿ ಇಂದಿರಾ, ಮಗಳು ಸಹನಾ, ಪ್ರಜ್ಞಾ ಹಾಗೂ ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.

You may also like

Leave a Comment