5
Belthangady: ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ-ಹುರ್ತಾಜೆ ರಸ್ತೆಯಲ್ಲಿ 10 ಕ್ಕಿಂತ ಅಧಿಕ ಸಾಕು ನಾಯಿ ಹಾಗೂ ಬೀದಿ ನಾಯಿಗಳು ವಿಷ ಪದಾರ್ಥ ಸೇವಿಸಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಶನಿವಾರ ರಾತ್ರಿ (ಮಾ.30) ಯಾರೋ ಆಹಾರದಲ್ಲಿ ವಿಷ ಹಾಕಿ ಅಲ್ಲಲ್ಲಿ ಎಸೆದು ಹೋಗಿದ್ದು, ಇದನ್ನು ತಿಂದ ನಾಯಿಗಳು ಅವುಗಳನ್ನು ತಿಂದು ಸತ್ತು ಬಿದ್ದಿದೆ. ಕೆಲವೊಂದು ನಾಯಿಗಳು ಕೆಲವರ ಮನೆಯಲ್ಲಿ ಹೋಗಿ ಸತ್ತು ಬಿದ್ದಿದೆ. ಈಸ್ಟರ್ ಹಬ್ಬದಿಂದ ತೆರಳುತ್ತಿದ್ದವರು ಇದನ್ನು ಗಮನಿಸಿ ಪಂಚಾಯತಿ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದಿದ್ದಾರೆ.
ಸಾವನ್ನಪ್ಪಿದ ನಾಯಿಗಳನ್ನು ಪಂಚಾಯಿತಿ ವತಿಯಿಂದ ದಫನ ಮಾಡಲಾಯಿತು.
