Home » ಶಿರಾಡಿ : ವಿದ್ಯುತ್ ಶಾಕ್‌ಗೆ ಯುವಕ ಬಲಿ

ಶಿರಾಡಿ : ವಿದ್ಯುತ್ ಶಾಕ್‌ಗೆ ಯುವಕ ಬಲಿ

by Praveen Chennavara
0 comments

ನೆಲ್ಯಾಡಿ: ವಿದ್ಯುತ್ ಶಾಕ್‌ಗೆ ಒಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.26ರಂದು ಸಂಜೆ ನಡೆದಿದೆ.

ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬವರ ಪುತ್ರ ರೋಫಿನ್(15ವ.)ಮೃತಪಟ್ಟ ಯುವಕ. ಈತ ಮಧ್ಯಾಹ್ನ ಮನೆಯಲ್ಲಿ ಜಾರ್ಜ್‌ಗೆ ಇಟ್ಟ ಮೊಬೈಲ್‌ಗೆ ತೆಗೆಯುತ್ತಿದ್ದಂತೆ ವಿದ್ಯುತ್‌ ಶಾಕ್‌ಗೆ ಒಳಗಾಗಿ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ಯದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

You may also like

Leave a Comment