Home » ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ | ಬೆಳ್ತಂಗಡಿ ಕಾಂಗ್ರೆಸ್ ನಿಂದ ವಿಜಯೋತ್ಸವ-ಸಂಭ್ರಮಾಚರಣೆ

ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ | ಬೆಳ್ತಂಗಡಿ ಕಾಂಗ್ರೆಸ್ ನಿಂದ ವಿಜಯೋತ್ಸವ-ಸಂಭ್ರಮಾಚರಣೆ

by Praveen Chennavara
0 comments

ಬಲು ಪ್ರತಿಷ್ಠೆಯ ಕಣವಾಗಿದ್ದ ಹಾನಗಲ್ ಉಪಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿದ ಕಾಂಗ್ರೆಸ್ಸಿನ ಸಂಭ್ರಮಕ್ಕೆ ಬೆಳ್ತಂಗಡಿ ಕಾಂಗ್ರೆಸ್ ಸಾಕ್ಷ್ಯವಾಯಿತು.

ಬೆಳ್ತಂಗಡಿಯ ಪೇಟೆಯ ಹೃದಯಭಾಗದಲ್ಲಿ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ,ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ ಹರೀಶ್ ಕುಮಾರ್,ಬೆಳ್ತಂಗಡಿಯ ಮಾಜಿ ಶಾಸಕರಾದ ಶ್ರೀ ಕೆ ವಸಂತ ಬಂಗೇರರು,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ರಂಜನ್ ಜಿ ಗೌಡರವರು,ನಗರ ಬ್ಲಾಕಿನ ಅಧ್ಯಕ್ಷರಾದ ಶ್ರೀ ಶೈಲೇಶ್ ಕುಮಾರ್ ರವರು ವಿಜೇತ ಅಭ್ಯರ್ಥಿಗೆ ಶುಭ ಹಾರೈಸುವುದರ ಜೊತೆಗೆ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚುನ ಮೂಲಕ ಹೊಸ ರಾಜಕೀಯ ಪರಿವರ್ತನೆಗೆ ಈ ಫಲಿತಾಂಶ ಸಾಕ್ಷ್ಯವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು,ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ನಾಗರಾಜ ಎಸ್ ಲೃಾಲ,ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಅಭಿನಂದನ್ ಹರೀಶ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ,ಜಿಲ್ಲಾ ಕಾಂಗ್ರೆಸ್ಸಿನ ಕಾರ್ಯದರ್ಶಿ ಜಗದೀಶ್ ಡಿ,ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ್,ಚಂದು ಎಲ್ ದಯಾನಂದ ಪಿ ಬೆಳಾಲು,ಶ್ರೀನಿವಾಸ್ ಗಾಂಧಿನಗರ, ಜಿಲ್ಲಾ ಎಸ್ಸಿ ಘಟಕದ ಸದಸ್ಯ ಪ್ರಭಾಕರ ಶಾಂತಿಕೋಡಿ, ಮೆಹಬೂಬ್ ಬೆಳ್ತಂಗಡಿ ಪಕ್ಷದ, ತಣ್ಣಿರುಪಂಥ ಗ್ರಾಮ ಪಂಚಾಯಿತಿಯ ಸದಸ್ಯರಾದ ಜಯವಿಕ್ರಮ್ ಕಲ್ಲಾಪು,ಪ್ರಮುಖರಾದ ಮೆಹಬೂಬ್,ಶುಭಿತ್ ಕುಮಾರ್,ಎಪಿಎಂಸಿ ಮಾಜಿ ಅಧ್ಯಕ್ಷರಾದ ಭರತ್,ಸಾಮಾಜಿಕ ಜಾಲತಾಣ ಅಧ್ಯಕ್ಷ ಸಂದೀಪ್ ಎಸ್ ನೀರಲ್ಕೆ ಅರ್ವ,ಶ್ರೀನಿವಾಸ್ ಕೆ.ಎಸ್,ರಫೀಕ್ ಕಕ್ಕೇನಾ,ಅರೀಪ್ ಕಕ್ಕೇನಾ ಲೃಾಲ, ಹಾಗು ಪಕ್ಷದ ವಿವಿಧ ಘಟಕಗಳ ಮುಖಂಡರು,ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

You may also like

Leave a Comment