Home » ಹಿಂದೂ ಮುಖಂಡ ಜಯಂತ್ ಕುಂಪಲ ಆತ್ಮಹತ್ಯೆ

ಹಿಂದೂ ಮುಖಂಡ ಜಯಂತ್ ಕುಂಪಲ ಆತ್ಮಹತ್ಯೆ

by Praveen Chennavara
0 comments

ಮಂಗಳೂರು: ಈ ಹಿಂದೆ ಹಿಂದೂ ಯುವಸೇನೆಯಲ್ಲಿ ಸಕ್ರಿಯರಾಗಿದ್ದ ಹಿಂದೂ ಕಾರ್ಯಕರ್ತ ಜಯಂತ್ ಎಸ್. ಕುಂಪಲ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಂಪಲದ ಕೃಷ್ಣನಗರ ಎರಡನೇ ಅಡ್ಡ ರಸ್ತೆಯ ಬಾಡಿಗೆ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ಜಯಂತ್ (49) ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಂತ್ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಹಾಲ್ ನಲ್ಲಿ ಶಾಲ್ ನಲ್ಲಿ ಕತ್ತಿಗೆ ಬಿಗಿದು ಪ್ರಾಣ ಬಿಟ್ಟಿದ್ದಾರೆ.

ಜಯಂತ್ ಅವರು ಸಕ್ರಿಯ ಈ ಹಿಂದೆ ಹಿಂದು ಸಂಘಟನೆ ಕಾರ್ಯಕರ್ತರಾಗಿದ್ದು ಹಣಕಾಸು ನಷ್ಟದ ಬಳಿಕ ತೊಕ್ಕೊಟ್ಟಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದರು.ಶುಕ್ರವಾರ ಮಂಗಳೂರಿನ ಕೂಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸ್ಮಾರ್ಟ್ ಫೋನನ್ನ ಕಳಕೊಂಡಿದ್ದರು ಎನ್ನಲಾಗಿದೆ.

ಮೃತ ಜಯಂತ್ ಅವರು ಕುಂಪಲ, ಹನುಮಾನ್ ನಗರದ ವೀರಾಂಜನೇಯ ವ್ಯಾಯಾಮ ಶಾಲೆ ಬಳಿಯ ತನ್ನ ಜಾಗದಲ್ಲಿ ಹೊಸತಾಗಿ ಗೃಹ ನಿರ್ಮಾಣ ಮಾಡುತ್ತಿದ್ದರು. ಕಾಮಗಾರಿ ಸಂಪೂರ್ಣಗೊಳ್ಳುತ್ತಿದ್ದ ವೇಳೆಯೇ ಅವರು ಆತ್ಮಹತ್ಯೆಗೈದಿದ್ದು ಅವರು ಪತ್ನಿ , ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ.

ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಉಳ್ಳಾಲ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದು ಬಾಡಿಯನ್ನು ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ

You may also like

Leave a Comment