Home » Haveri: ಧರ್ಮಸ್ಥಳದಲ್ಲಿ ಮದುವೆಯಾದ ಹಿಂದು-ಮುಸ್ಲಿಂ ಜೋಡಿ; ತಂಜೀಮ್‌ ಭಾನುಗಾಗಿ ಪೊಲೀಸ್‌ ಸ್ಟೇಷನ್‌ನಲ್ಲಿ ಗಂಡನ ಧರಣಿ

Haveri: ಧರ್ಮಸ್ಥಳದಲ್ಲಿ ಮದುವೆಯಾದ ಹಿಂದು-ಮುಸ್ಲಿಂ ಜೋಡಿ; ತಂಜೀಮ್‌ ಭಾನುಗಾಗಿ ಪೊಲೀಸ್‌ ಸ್ಟೇಷನ್‌ನಲ್ಲಿ ಗಂಡನ ಧರಣಿ

0 comments

Haveri: ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆಗೆಂದು ಪೊಲೀಸರ ಮೊರೆ ಹೋದ ಸಂದರ್ಭದಲ್ಲಿ ಯುವತಿಯನ್ನು ಪೊಲೀಸರು ಯುವಕನ ಜೊತೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದು, ಇದರಿಂದ ಪ್ರಿಯಕರ ಪೊಲೀಸ್‌ ಠಾಣೆ ಮುಂದೆಯೇ ಪ್ರತಿಭಟನೆ ಮಾಡಿದ್ದಾರೆ. ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆದಿರುವುದು ಹಾವೇರಿ ಮಹಿಳಾ ಠಾಣೆಯಲ್ಲಿ. ತನ್ನ ಸ್ನೇಹಿತರ ಜೊತೆ ಸೇರಿ ಪ್ರಿಯಕರ ಪ್ರತಿಭಟನೆ ಮಾಡಿದ್ದಾನೆ. ಕಳೆದ ಮೂರು ವರ್ಷದಿಂದ ಯುವಕ ಪ್ರದೀಪ್‌ ಬಣಕಾರ್‌ ಮತ್ತು ತಂಜಿಮ್‌ ಭಾನು ಪರಸ್ಪರ ಪ್ರೀತಿ ಮಾಡುತ್ತಿದ್ದು, ಹದಿನೈದು ದಿನದ ಹಿಂದೆ ಮನೆಯಿಂದ ಓಡಿ ಹೋಗಿದ್ದರು. ನಂತರ ಧರ್ಮಸ್ಥಳಕ್ಕೆ ಹೋಗಿ ವಿವಾಹವಾಗಿದ್ದಾರೆ.

ಅಲ್ಲಿಂದ ನೇರವಾಗಿ ಹಾವೇರಿ ಮಹಿಳಾ ಪೊಲೀಸ್‌ ಠಾಣೆಗೆ ಬಂದ ಜೋಡಿ ಬಂದಿದ್ದು, ಮನೆಯವರ ಬೆದರಿಕೆ ಇದ್ದುದ್ದರಿಂದ ರಕ್ಷಣೆ ಕೋರಿ ಬಂದಿದ್ದರು. ಪೊಲೀಸರು ಇದೀಗ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ, ಎಲ್ಲಾ ಸಮಸ್ಯೆ ಬಗೆಹರಿದಿದ್ದರೂ, ಆಕೆಯನ್ನು ಮಾತ್ರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಆಕೆಯನ್ನು ಮನೆಗೆ ಕಳಿಸಿಕೊಂಡುವಂತೆ ಪ್ರಿಯಕರ ಹೇಳಿದ್ದಾನೆ.

ಆದರೆ ಪೊಲೀಸರು ಈಗ ಹೊರಗೆ ಹೋದರೆ ಸಮಸ್ಯೆ ಆಗುತ್ತೆ, ಇಬ್ಬರಿಗೂ ಏನಾದರೂ ಮಾಡಬಹುದು. ಅದಕ್ಕೆ ಅಲ್ಲಿಯೇ ಕೂರಿಸಿದ್ದಾರೆ ಎಂದು ಹೇಳಿದ್ದಾನೆ. ನಾನು ನನ್ನ ಹೆಂಡ್ತಿನ ಕರೆದುಕೊಂಡು ಹೋಗಬೇಕು ಎಂದು ಸ್ಟೇಷನ್‌ ಮುಂದೆಯೇ ಕೂತುಕೊಳ್ತೇನೆ ಎಂದು ಯುವಕ ಪಟ್ಟು ಹಿಡಿದು ಕುಳಿತಿರುವುದಾಗಿ ವರದಿಯಾಗಿದೆ.

You may also like

Leave a Comment