3
ಆದರ್ಶ ದಂಪತಿಗಳಿಬ್ಬರು ಜೊತೆಯಾಗಿ ಪ್ರಾಣಬಿಟ್ಟ ಘಟನೆ ಉಪ್ಪಿನಂಗಡಿಯ ಸಮೀಪದ ಪದ್ಮುಂಜ ಎಂಬಲ್ಲಿಂದ ವರದಿಯಾಗಿದೆ.
ಉಪ್ಪಿನಂಗಡಿಯ ಸಹಿತ ಹಲವೆಡೆ ತನ್ನ ನಾಟಿ ಮದ್ದಿನಿಂದ ‘ನಾಟಿವೈದ್ಯ’ ಎಂದೇ ಚಿರಪರಿಚಿತರಾಗಿದ್ದ ವೆಂಕಪ್ಪ ಪಂಡಿತ ನವೆಂಬರ್ 19 ರ ರಾತ್ರಿ ನಿಧನಹೊಂದಿದರೆ, ಮರುದಿನ ಅವರ ಹೆಂಡತಿಯು ಸರಸ್ವತಿ ಕೂಡಾ ಮರಣಹೊಂದಿದ್ದಾರೆ.
ನಾಟಿವೈದ್ಯರಾಗಿ ಪ್ರಸಿದ್ಧಿ ಪಡೆದಿದ್ದ ವೆಂಕಪ್ಪ ಪಂಡಿತ ಹಲವಾರು ಖಾಯಿಲೆಗಳಿಗೆ ರಾತ್ರಿ ಹಗಲೆನ್ನದೆ ಮದ್ದು ನೀಡುತ್ತಿದ್ದರು. ಮೃತರು ಇಬ್ಬರು ಪುತ್ರರನ್ನು, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಅಗಲಿದ್ದಾರೆ.
