Home » ಕಡಬ : ವಿದ್ಯಾರ್ಥಿಗೆ ಕಚ್ಚಿ ಗಾಯಗೊಳಿಸಿದ ನಾಯಿ | ನಾಯಿಯನ್ನು ಕೊಂದು ಹಾಕಿದ ಸಾರ್ವಜನಿಕರು

ಕಡಬ : ವಿದ್ಯಾರ್ಥಿಗೆ ಕಚ್ಚಿ ಗಾಯಗೊಳಿಸಿದ ನಾಯಿ | ನಾಯಿಯನ್ನು ಕೊಂದು ಹಾಕಿದ ಸಾರ್ವಜನಿಕರು

by Praveen Chennavara
0 comments

ಕಡಬ : ನಾಯಿಯೊಂದು ವಿದ್ಯಾರ್ಥಿಯೋರ್ವನಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಕಡಬ ಪೇಟೆಯಲ್ಲಿ ಬುಧವಾರದಂದು ನಡೆದಿದೆ.

ಗಾಯಗೊಂಡ ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದೆ. ಎಂದಿನಂತೆ ಮದರಸ ಬಿಟ್ಟು ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ಎರಗಿದ್ದು, ಕೈಗೆ ಕಚ್ಚಿದೆ‌ ಎಂದು ತಿಳಿದುಬಂದಿದೆ. ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ.

You may also like

Leave a Comment