Home » ಕಡಬ : ಮಸೀದಿಗೆ ನಮಾಝ್‌ಗೆ ತೆರಳಿದ ವ್ಯಕ್ತಿ ನಾಪತ್ತೆ

ಕಡಬ : ಮಸೀದಿಗೆ ನಮಾಝ್‌ಗೆ ತೆರಳಿದ ವ್ಯಕ್ತಿ ನಾಪತ್ತೆ

by Praveen Chennavara
0 comments

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಫೆ.4ರಂದು ಮಸೀದಿಗೆ ಜುಮಾ ನಮಾಝ್‌ಗೆಂದು ಮನೆಯಿಂದ ಹೋದ
ಮಣ್ಣಗುಂಡಿ ನಿವಾಸಿ ಇಬ್ರಾಹಿಂ(57೭ವ.)ರವರು ನಾಪತ್ತೆಯಾದ ವ್ಯಕ್ತಿ.ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ಅಬ್ದುಲ್ ರಶೀದ್‌ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಫೆ.4ರಂದು ಮಧ್ಯಾಹ್ನ 12ಗಂಟೆ ವೇಳೆಗೆ ಶುಕ್ರವಾರದ ಪ್ರಾರ್ಥನೆಗಾಗಿ ಕೌಕ್ರಾಡಿ ಗ್ರಾಮದ ಹೊಸಮಜಲು ಮಸೀದಿಗೆಂದು ಮನೆಯಿಂದ ಹೋದವರು ವಾಪಸು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಅವರು ಮೊಬೈಲ್ ಫೋನ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.

ಮನೆಯಿಂದ ಹೋಗುವ ವೇಳೆ ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ಕಡು ನೀಲಿ ಬಣ್ಣದ ಪಂಚೆ ಉಟ್ಟಿದ್ದರು. ಕನ್ನಡ, ಮಲಯಾಳಂ, ತುಳು, ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇವರ ಬಗ್ಗೆ ಮಾಹಿತಿ ತಿಳಿದವರು ಮೊ: 9880360231, 7760832152 ಗೆ ತಿಳಿಸುವಂತೆಯೂ ಅಬ್ದುಲ್ ರಶೀದ್‌ರವರು ಕೋರಿದ್ದಾರೆ.

You may also like

Leave a Comment