Home » ಕಡಬ:ತಾಲೂಕಿನಲ್ಲಿ ಹೆಚ್ಚುತ್ತಿದೆ ಕಳ್ಳರ ಕಾರುಬಾರು!! ಮನೆ ಮಂದಿ ಇಲ್ಲದ ವೇಳೆ ಲಾಪ್ ಟಾಪ್ ಸಹಿತ ನಗದು ದರೋಡೆ

ಕಡಬ:ತಾಲೂಕಿನಲ್ಲಿ ಹೆಚ್ಚುತ್ತಿದೆ ಕಳ್ಳರ ಕಾರುಬಾರು!! ಮನೆ ಮಂದಿ ಇಲ್ಲದ ವೇಳೆ ಲಾಪ್ ಟಾಪ್ ಸಹಿತ ನಗದು ದರೋಡೆ

0 comments

ಕಡಬ: ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಮನೆಯೊಂದರಲ್ಲಿ ಮನೆ ಮಂದಿ ಇಲ್ಲದ ವೇಳೆ ಕಳ್ಳರು ಕೈಚಳಕ ಮೆರೆದ ಘಟನೆ ಬೆಳಕಿಗೆ ಬಂದಿದ್ದು, ಮನೆ ಮಾಲೀಕ ಕಳಿಗೆ ಹೊನ್ನಯ್ಯ ಗೌಡ ಅವರು ನೀಡಿದ ದೂರನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಹೊನ್ನಯ್ಯ ಗೌಡ ಹಾಗೂ ಮನೆಯವರು ಎ.09 ರಂದು ಮನೆ ಸಮೀಪದಲ್ಲಿ ನಡೆಯುತ್ತಿದ್ದ ಭೂತ ಕೋಲಕ್ಕೆ ತೆರಳಿದ್ದು, ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬಾಗಿಲು ಒಡೆದು ಮನೆಗೆ ನುಗ್ಗಿದ್ದಾರೆ.

ಕೆಲ ಹೊತ್ತಿನ ಬಳಿಕ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದ್ದು, ಮನೆಯ ಕಾಪಾಟಿನಲ್ಲಿದ್ದ 22 ಸಾವಿರ ನಗದು, ಒಂದು ಲ್ಯಾಪ್ ಟಾಪ್, ಪರ್ಸ್ ಸಹಿತ ಸುಮಾರು 80 ಸಾವಿರ ಮೌಲ್ಯದ ಸೊತ್ತನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕಡಬ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು,ಕಡಬ ಪರಿಸರದ ಬಗ್ಗೆ ಹೆಚ್ಚು ತಿಳಿದಿರುವ ತಂಡವೇ ಈ ಕೃತ್ಯ ಎಸಗುತ್ತಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿ ಕಳ್ಳರ ಜಾಲವನ್ನು ಮಟ್ಟಹಾಕಬೇಕೆಂಬ ಆಗ್ರಹ ವ್ಯಕ್ತವಾಗಿದೆ.

You may also like

Leave a Comment