Home » ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ | ಕೂದಲೆಳೆ ಅಂತರದಲ್ಲಿ ತಪ್ಪಿದ 2 ವಿಮಾನಗಳ ನಡುವಿನ ಡಿಕ್ಕಿ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ | ಕೂದಲೆಳೆ ಅಂತರದಲ್ಲಿ ತಪ್ಪಿದ 2 ವಿಮಾನಗಳ ನಡುವಿನ ಡಿಕ್ಕಿ

0 comments

ಇತ್ತೀಚೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಎರಡು ಇಂಡಿಗೋ ದೇಶೀಯ ವಿಮಾನಗಳು ಹಾರಾಟ ನಡೆಸುತ್ತಿರುವಾಗ ಡಿಕ್ಕಿ ಹೊಡೆದು ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿದ ಘಟನೆ ನಡೆದಿದೆ.

ಆದರೆ ವಿಪರ್ಯಾಸವೆಂದರೆ, ಈ ಘಟನೆಯನ್ನು ವಿಮಾನ ನಿಲ್ದಾಣದ ಲಾಗ್‌ಬುಕ್‌ಗಳಲ್ಲಿ ದಾಖಲಿಸುವುದಾಗಲಿ ಅಥವಾ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ದೇಶದ ವಾಯುಯಾನ ನಿಯಂತ್ರಕಕ್ಕೆ ವರದಿ ಮಾಡುವುದಾಗಲಿ ಮಾಡಿಲ್ಲ. ಇಂತಹ ಘಟನೆಗಳಾದಾಗ ಇವೆರಡೂ ಕಡ್ಡಾಯವಾಗಿರುತ್ತದೆ.

ಮೊನ್ನೆ ಜನವರಿ 7ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಭವಿಸಿದ ಘಟನೆಗೆ ಏರ್ ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ನಿಯಂತ್ರಕರ ನಡುವಿನ ಸಂವಹನದ ಕೊರತೆಯೇ ಇದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ಮಹಾ ನಿರ್ದೇಶಕ ಅರುಣ್ ಕುಮಾರ್, ವಿಮಾನ ಸಂಖ್ಯೆ 6ಜಿ 455 ಕೋಲ್ಕತ್ತಾದಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಇನ್ನೊಂದು ವಿಮಾನ ಸಂಖ್ಯೆ 6ಇ 246 ಬೆಂಗಳೂರಿನಿಂದ ಭುವನೇಶ್ವರ ಕಡೆಗೆ ಹಾರಾಟ ನಡೆಸುತ್ತಿತ್ತು. ಇಲ್ಲಿ ಪ್ರತ್ಯೇಕ ಹಾರಾಟದ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿದರು.

You may also like

Leave a Comment