Mangalore : ಸುಳ್ಯದ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಮರಿಯಾನೆ ಮೃತಪಟ್ಟಿದೆ. ಮರಿ ಆನೆಯನ್ನು ದುಬಾರೆಯ ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಇದೀಗ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ (Mangalore) ಸಾವನ್ನಪ್ಪಿದೆ.
ಎ.13ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದ ಸಂಪತ್ ರೈಯವರ ತೋಟದ ಕೆರೆಗೆ ಬಿದ್ದಿದ್ದವು, ಬಳಿಕ ಮೂರು ಆನೆಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಆದರೆ ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ ಮೇಲಕ್ಕೆ ಹತ್ತಿಸಿದ್ದರು.
ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ. ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ತಾಯಿ ಆನೆ ಮರಿಯಾನೆಯನ್ನು ಸೇರಿಸಿಕೊಂಡಿರಲಿಲ್ಲ.ಹೀಗಾಗಿ ಮರಿಯಾನೆ ವಾಪಸ್ ಬಂದಿತ್ತು.
ಕಾಂಗ್ರೆಸ್ ಹಾಲಿ ಶಾಸಕನ ಸಹೋದರನ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್; ವಿಡಿಯೋ ವೈರಲ್
