Home » ಕೊಣಾಜೆ ಎಸ್ ಐ ಮೇಲೆ ಕಳ್ಳತನದ ಆರೋಪಿಯಿಂದ ಚೂರಿ ಇರಿತ

ಕೊಣಾಜೆ ಎಸ್ ಐ ಮೇಲೆ ಕಳ್ಳತನದ ಆರೋಪಿಯಿಂದ ಚೂರಿ ಇರಿತ

by Praveen Chennavara
0 comments

ಉಳ್ಳಾಲ: ಕಳ್ಳತನದ ಆರೋಪಿಯನ್ನು ಹಿಡಿಯಲು ತೆರಳಿದ ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡಿರುವ ಎಸ್ ಐ ಶರಣಪ್ಪ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಬೆಲೆಬಾಳುವ ವಾಚ್ ಕಳ್ಳತನದ ಆರೋಪಿ ಪಾವೂರಿನಲ್ಲಿ ಆತನ ಅತ್ತೆ ಮನೆಯಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದರು.

ಕೃತ್ಯ ನಡೆಸಿದ ಆರೋಪಿ ಈ ಹಿಂದೆ ಕೂಡಾ ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಹಿಂದಿನ ಪ್ರಕರಣದಲ್ಲಿ ಬೆಲೆಬಾಳುವ ವಾಚ್ ನ್ನು ಅಂಗಡಿಯೊಂದಕ್ಕೆ ಮಾರಾಟ ಮಾಡಲು ತೆರಳಿದ್ದ ಮಾಹಿತಿಯನ್ನು ಅಂಗಡಿ ಮಾಲಿಕರು ಪೊಲೀಸರಿಗೆ ತಿಳಿಸಿದ್ದ ಮಾಹಿತಿ ಆಧಾರದಲ್ಲಿ ನಗರ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ತೆರಳಿದ್ದಾಗ ಬಂದರು ಠಾಣಾ ಪೊಲೀಸ್‌ ಸಿಬಂದಿ ವಿನೋದ್‌ ಮತ್ತು ಪ್ರವೀಣ್‌ ಎಂಬವರಿಗೆ ಆರೋಪಿ ಹಲ್ಲೆ ಮಾಡಿ ವಿನೋದ್ ಅವರಿಗೆ ಚೂರಿಯಿಂದ ಇರಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಆ ಬಳಿಕ ಆತ ಪಾವೂರಿನ ಅತ್ತೆ ಮನೆಯಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ಎಸ್ ಐ ಶರಣ್ಣ ಹಾಗೂ ಸಿಬ್ಬಂದಿ ಬುಧವಾರ ದಾಳಿ ಮಾಡಿದಾಗ ಆರೋಪಿ ಎಸ್ ಐ ಶರಣಪ್ಪ ಅವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಾಯಗೊಂಡಿರುವ ಶರಣಪ್ಪ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ

You may also like

Leave a Comment