Home » Sulia : ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದ ವ್ಯಕ್ತಿ ಕುಸಿದು ಬಿದ್ದು ಸಾವು !!

Sulia : ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದ ವ್ಯಕ್ತಿ ಕುಸಿದು ಬಿದ್ದು ಸಾವು !!

0 comments

Sulia : ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದ ವ್ಯಕ್ತಿಯೊಬ್ಬರು ತಾಲೂಕು ಕಚೇರಿಯ ಪಡಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸುಳ್ಯದಲ್ಲಿ ಬುಧವಾರ ನಡೆದಿದೆ.

ಹೌದು, ಅಡ್ಕಾರಿನ ರಾಘವ ಆಚಾರ್ಯ (65) ಎಂಬವರು ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಬುಧವಾರ ಸುಳ್ಯ(Sulia) ತಾಲೂಕು ಕಚೇರಿಯ ಪಡಶಾಲೆಗೆ ಬಂದಿದ್ದರು. ಅರ್ಜಿ ಸ್ವೀಕರಿಸಿದ ಅಲ್ಲಿನ ಸಿಬ್ಬಂದಿ ಒಟಿಪಿ ಬರುವವರೆಗೆ ಕುಳಿತುಕೊಳ್ಳಿ ಎಂದು ಹೇಳಿದ ಮೇರೆಗೆ ಪಡಶಾಲೆಯ ಆವರಣದಲ್ಲಿನ ಬೆಂಚ್‍ನಲ್ಲಿ ಅವರು ಕುಳಿತಿದ್ದರು. ಸ್ವಲ್ಪ ಹೊತ್ತಲ್ಲಿ ಒಟಿಪಿ ಬಂದಾಗ ರಾಘವ ಆಚಾರ್ಯರನ್ನು ಸಿಬ್ಬಂದಿ ಕೌಂಟರ್ ಬಳಿಗೆ ಕರೆದರು.

ಆದರೆ ಕುಳಿತಲ್ಲಿಂದ ಎದ್ದು ಕೌಂಟರ್ ಬಳಿಗೆ ಬರುತ್ತಿದ್ದಂತೆ ರಾಘವ ಆಚಾರ್ಯರು ಕುಸಿದು ಬಿದ್ದರು. ತಕ್ಷಣ ಅಲ್ಲಿನ ಸಿಬ್ಬಂದಿ ಅವರನ್ನು ಉಪಚರಿಸಿ ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಅಂಬ್ಯುಲೆನ್ಸ್ ಬರುವ ವೇಳೆಗೆ ರಾಘವ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ.

You may also like

Leave a Comment