Home » ಮಂಗಳೂರು : ಭೀಕರ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ರಕ್ | ಸವಾರ ಸಾವು

ಮಂಗಳೂರು : ಭೀಕರ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ರಕ್ | ಸವಾರ ಸಾವು

0 comments

ಮಂಗಳೂರು: ನಗರದ ಹೊರವಲಯದ ಸುರತ್ಕಲ್‌ನಲ್ಲಿ ಫ್ಲೈಓವರ್‌ ಬಳಿ ಇಂದು ಸಂಜೆ 7.30ರ ಸುಮಾರಿಗೆ ಬೈಕ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಇಂದು ಸಂಜೆ ಗೋವಿಂದ ದಾಸ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ನಡಿಗೆ ಬೈಕ್‌ ಸಿಲುಕಿ, ಸವಾರನ ತಲೆಯ ಮೇಲೆ ಟ್ರಕ್‌ನ ಚಕ್ರ ಹರಿದು ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಸವಾರನ ತಲೆಯು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು, ರಸ್ತೆಪೂರ್ತಿ ರಕ್ತದೋಕುಳಿಯಾಗಿತ್ತು.
ಭೀಕರ ಅಪಘಾತದಿಂದ ಸ್ಥಳದಲ್ಲಿ ಹಲವು ಹೊತ್ತು ಟ್ರಾಫಿಕ್‌ ಜಾಂ ಆಗಿದ್ದು, ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಸುರತ್ಕಲ್ ನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment