Home » ಮಂಗಳೂರು : ಅಪಾರ್ಟ್ಮೆಂಟ್ ನಲ್ಲಿ ನವವಿವಾಹಿತ ದಂಪತಿಯಿಂದ ಆತ್ಮಹತ್ಯೆ!!!

ಮಂಗಳೂರು : ಅಪಾರ್ಟ್ಮೆಂಟ್ ನಲ್ಲಿ ನವವಿವಾಹಿತ ದಂಪತಿಯಿಂದ ಆತ್ಮಹತ್ಯೆ!!!

0 comments

ಮಂಗಳೂರು: ಮದುವೆಯಾಗಿ ಒಂದೂವರೆ ವರ್ಷವಷ್ಟೇ ಕಳೆದ ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ (35), ಸೌಮ್ಯ (34) ಎಂಬವರೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ದಂಪತಿಗಳು.

ಮೂಲತ: ಹುಬ್ಬಳ್ಳಿಯವನಾಗಿದ್ದ ಮನೋಜ್ ಫ್ರೀಲಾನ್ಸ್ ವೆಬ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಮಂಗಳೂರಿನವರೇ ಆಗಿರುವ ಸೌಮ್ಯ ಐಟಿಐ ಕಾಲೇಜು ಉಪನ್ಯಾಸಕಿ ಆಗಿದ್ದರು.

ಎರಡು ದಿನದ ಕೊಡಗಿಗೆಂದು ಪ್ರವಾಸಕ್ಕೆ ಹೋಗಿದ್ದ ದಂಪತಿ ನಂತರ ಹಿಂತಿರುಗಿ ಬಂದು, ತಮ್ಮ ಮನೆಯವರಿಗೆ ತಿಳಿಸಿ, ತಾವು ವಾಸವಾಗಿದ್ದ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಮನೆಯವರು ಬರುವಷ್ಟರಲ್ಲಿ ದುರ್ಘಟನೆ ನಡೆದೇ ಹೋಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಆದರೆ ಆತ್ಮಹತ್ಯೆಗೆ ನಿಜವಾದ ಕಾರಣ ಏನೆಂದು ತಿಳಿದುಬಂದಿಲ್ಲ.

You may also like

Leave a Comment