Home » ಮಂಗಳೂರು : ಗೋ ಕಳ್ಳತನ – ಆರೋಪಿಗಳ ಬಂಧನ ಕಾರ್ಯ ಯಶಸ್ವಿ

ಮಂಗಳೂರು : ಗೋ ಕಳ್ಳತನ – ಆರೋಪಿಗಳ ಬಂಧನ ಕಾರ್ಯ ಯಶಸ್ವಿ

0 comments

ಇತ್ತೀಚೆಗೆ ಗೋಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪೊಲೀಸರು ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದೇ ಮೂಕ ಪ್ರಾಣಿಯನ್ನು ಕಳ್ಳತನ ಮಾಡಿ ಕೊಂಡೊಯ್ಯುವವರ ಸಂಖ್ಯೆ ಅಧಿಕವಾಗಿದೆ. ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿ, ಅಲ್ಲಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟರೂ ಈ ಗೋ ಕಳ್ಳತನದ ದಂಧೆ ಮುಂದುವರಿಯುತ್ತಿದೆ.

ಎ.25 ರಂದು ಪಣಂಬೂರು ಠಾಣಾ ವ್ಯಾಪ್ತಿಯ ತೋಕೂರಿನಲ್ಲಿ ಮಹಾಬಲ ಪೂಜಾರಿ ಎಂಬುವವರ ಮನೆಯಿಂದ ಗೋಕಳ್ಳತನ ನಡೆದಿತ್ತು. ರಾತ್ರಿ ವೇಳೆ ಆಗಮಿಸಿದ ದುಷ್ಕರ್ಮಿಗಳು ಹಟ್ಟಿಯಿಂದ ಗೋವುಗಳನ್ನು ಕದ್ದೊಯ್ದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಮ್ಮದ್ ಇಸ್ಮಾಯಿಲ್, ಸಮೀರ್ ಜೋಕಟ್ಟೆ, ದಾವೂದ್ ಹಕೀಂ, ಮಹಮ್ಮದ್ ಇಲ್ಯಾಸ್ ಜೋಕಟ್ಟೆ ಬಂಧಿತ ಆರೋಪಿಗಳಾಗಿದ್ದಾರೆ. ಪಣಂಬೂರು ಠಾಣಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ

You may also like

Leave a Comment