Home » ಮಂಗಳೂರು : ರಥಬೀದಿ ಕಾಲೇಜಿನ ಹಿಜಾಬ್ ಪ್ರಕರಣ| 15 ಮಂದಿ ವಿರುದ್ಧ ಎಫ್ ಐಆರ್

ಮಂಗಳೂರು : ರಥಬೀದಿ ಕಾಲೇಜಿನ ಹಿಜಾಬ್ ಪ್ರಕರಣ| 15 ಮಂದಿ ವಿರುದ್ಧ ಎಫ್ ಐಆರ್

0 comments

ಮಂಗಳೂರು : ನಗರದ ರಥಬೀದಿಯ ದಯಾನಂದ ಪೈ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹಿಜಾಬ್ ಗಲಾಟೆಗೆ ಸಂಬಂಧಿಸಿದಂತೆ 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬ ಮಾಹಿತಿ ಇದೆ.

ಸಾಯಿ ಸಂದೇಶ್ ಪ್ರಮುಖ ಆರೋಪಿ ಸ್ಥಾನದಲ್ಲಿದ್ದಾನೆ. ಹಾಗೂ‌ ಇತರರ ಮೇಲೆ ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಯಾನಂದ ಪೈ – ಸತೀಶ್ ಪೈ ಕಾಲೇಜಿನ ವಿದ್ಯಾರ್ಥಿಗಳಾದ ನಿತೇಶ್ ಶೆಟ್ಟಿ ( 20), ಸಮಂತ್ ಆಳ್ವ ( 21), ಸನತ್ ಶೆಟ್ಟಿ ( 20), ಸಾಯಿ ಸಂದೇಶ್ ( 20) ಹಾಗೂ ಇತರ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಮಾ.4 ರ ರಾತ್ರಿ ವಿದ್ಯಾರ್ಥಿನಿ ಹಿಬಾ ಶೇಖ್ ಬಂದರು ಠಾಣೆಗೆ ದೂರು ನೀಡಿದ್ದರು.

ಪೊಲೀಸರು 8 ಜನರ ಮೇಲೆ ಎಫ್ ಐ ಆರ್ ಆಗಿದೆ ಎಂಬ ಮಾಹಿತಿ ನೀಡಿದ್ದಾರೆ.

You may also like

Leave a Comment