2
ಮಂಗಳೂರು : ಆಕ್ಷೇಪಾರ್ಹ ಬರಹ ಪೋಸ್ಟ್ ಹಾಕಿರುವ ‘ ಮಂಗ್ಳೂರು ಮುಸ್ಲಿಂ’ ಹೆಸರಿನ ಫೇಸ್ಬುಕ್ ಖಾತೆಯನ್ನು ಅರಬ್ ರಾಷ್ಟ್ರದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣದ ಸಮಗ್ರ ತನಿಖೆಯನ್ನು ಕರ್ನಾಟಕ ಅಪರಾಧ ತನಿಖಾ ವಿಭಾಗ ( ಸಿಐಡಿ) ವಹಿಸಿಕೊಂಡಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮಂಗ್ಳೂರು ಮುಸ್ಲಿಂ ಪೇಜ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದ್ದು, ರಾಜ್ಯ ಇಂಟಲಿಜೆನ್ಸ್ ಸೇರಿದಂತೆ ಬೇರೆ ತನಿಖಾ ತಂಡಗಳು ಸಮನ್ವಯ ಸಾಧಿಸಿಕೊಂಡು ಸಾಮಾಜಿಕ ಜಾಲತಾಣದ ಬಗ್ಗೆ ನಿಗಾ ಇಟ್ಟಿದೆ. ಹಾಗಾಗಿ ಅಗತ್ಯ ಬಿದ್ದ ಸಂದರ್ಭದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
